ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ವಿಧಿವಶ…

133
firstsuddi

ನವದೆಹಲಿ : ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್(74) ಅವರು ನಿಧನರಾಗಿದ್ದಾರೆ. ಭಾರತದ ಪ್ರಮುಖ ದಲಿತ ನಾಯಕರಲ್ಲಿ ಒಬ್ಬರಾಗಿದ್ದ ರಾಮ್ ವಿಲಾಸ್ ಪಾಸ್ವಾನ್ ಅವರು ಕಳೆದ ಕೆಲವು ವಾರಗಳ ಹಿಂದೆ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಪಾಸ್ವಾನ್ ಅವರು ಮೃತಪಟ್ಟಿರುವ ಬಗ್ಗೆ ಅವರ ಮಗ ಲೋಕ್ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರು, “ಪಪ್ಪ, ನೀವೀಗ ಈ ಲೋಕದಲ್ಲಿಲ್ಲ. ಆದರೆ ನೀವು ಎಲ್ಲೆ ಇದ್ದರೂ ನನನ್ನಂದಿಗೆ ಸದಾ ಇರುತ್ತೀರಾ ಎಂದು ನನಗೆ ಗೊತ್ತಿದೆ. ಮಿಸ್ ಯೂ ಪಪ್ಪ” ಎಂದು ಬರೆದುಕೊಂಡಿದ್ದಾರೆ.