ಧರ್ಮಸ್ಥಳ: ಶಬರಿಮಲೆಗೆ ಇಂದು ಇಬ್ಬರು ಮಹಿಳೆಯರು ಪ್ರವೇಶ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರು ನಮ್ಮ ಪ್ರಕಾರ ಸಂಪ್ರದಾಯದ ರಕ್ಷಣೆಯಾಗಬೇಕು. ಯಾಕೆ ಹೋಗಬಾರದು ಎಂದು ಮೊದಲು ವಿಮರ್ಶೆ ಮಾಡಬೇಕು. ಆಚಾರ, ವಿಚಾರ, ಸಂಯಮ ಅನ್ನೋದು ಇದೆ. ಈಗೆಲ್ಲ ಬೆಳಗ್ಗೆ ಮಾಲೆ ಹಾಕಿ ಮಧ್ಯಾಹ್ನ ಸನ್ನಿಧಾನಕ್ಕೆ ಹೋಗುತ್ತಿದ್ದಾರೆ ಇದರಿಂದ ಅಪಪ್ರಚಾರಗಳಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.










