ತುಮಕೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು,ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಡಾ. ಪರಮೇಶ್ ತಿಳಿಸಿದ್ದಾರೆ. ಶಿವಲಿಂಗ ಪೂಜೆ ವೇಳೆ ಶ್ರೀಗಳು ಮಂತ್ರ ಪಠಿಸಿದ್ದು, ಡಾ.ಪರಮೇಶ್ ನೇತೃತ್ವದಲ್ಲಿ ಮಠದಲ್ಲಿಯೇ ಶ್ರೀಗಳಿಗೆ ಚಿಕಿತ್ಸೆ ಮುಂದುವರೆಸಲಾಗಿದೆ.










