ಮಹಿಳೆಯರ ಪ್ರವೇಶ: ಭುಗಿಲೆದ್ದ ಅಯ್ಯಪ್ಪ ಭಕ್ತರ ಆಕ್ರೋಶ…

285
firstsuddi

ತಿರುವನಂತಪುರಂ: ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ 40 ವರ್ಷದ  ಬಿಂದು ಮತ್ತು ಕನಕದುರ್ಗ ಎನ್ನುವ ಇಬ್ಬರು ಮಹಿಳೆಯರು   ಇಂದು  ಮುಂಜಾನೆ  ದೇವಾಲಯ ಪ್ರವೇಶಿಸಿದ  ಹಿನ್ನಲೆ ಅಯ್ಯಪ್ಪ  ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ರಸ್ತೆಯನ್ನು ತಡೆದು ಹಲವೆಡೆ ಪ್ರತಿಭಟನೆ ನಡೆಸಲಾಗುತ್ತಿದೆ. ಶಬರಿ ಮಲೆ ದೇಗುಲದೊಳಗೆ ಮಹಿಳೆಯರು ಪ್ರವೇಶಿಸಿದುದನ್ನು ಖಂಡಿಸಿ ಬಿಜೆಪಿ ಕೇರಳದಲ್ಲಿ ಭಾರೀ ಪ್ರತಿಭಟನೆ ನಡೆಸಲು ಸಜ್ಜಾಗಿದೆ. ಬಿಂದು ಹಾಗೂ ಕನಕದುರ್ಗ ಅವರ ಮನೆ ಮೇಲೆ ಕಲ್ಲು ತೂರಾಟ ವಾದ ಹಿನ್ನಲೆ ಅವರಿಬ್ಬರನ್ನು ಪೊಲೀಸರು  ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.