ಮಹಿಳೆಯರ ಪ್ರವೇಶ: ಶುದ್ಧೀಕರಣಕ್ಕಾಗಿ ಅಯ್ಯಪ್ಪ ದೇವಾಲಯ ತಾತ್ಕಾಲಿಕವಾಗಿ ಬಂದ್…

317
firstsuddi

ತಿರುವನಂತಪುರಂ: ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ 40 ವರ್ಷದ  ಬಿಂದು ಮತ್ತು ಕನಕದುರ್ಗ ಎನ್ನುವ ಇಬ್ಬರು ಮಹಿಳೆಯರು  ಇಂದು  ಮುಂಜಾನೆ  3-30ರ ಸುಮಾರಿಗೆ ದೇವಾಲಯ ಪ್ರವೇಶಿಸಿದ  ಹಿನ್ನಲೆ ತಾತ್ಕಾಲಿಕವಾಗಿ ದೇವಾಲಯವನ್ನು ಬಂದ್ ಮಾಡಿದ್ದಾರೆ.  ಅರ್ಚಕರ ನೇತೃತ್ವದಲ್ಲಿ  ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ ಶುದ್ಧೀಕರಣ ಕಾರ್ಯಗಳು ಆರಂಭಗೊಂಡಿದ್ದು, ಶುದ್ದೀಕರಣದ ಬಳಿಕ ದೇವಾಲಯವನ್ನು ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ.