ಮೀ ಟೂ ಬಗ್ಗೆ ನಟಿ ಹರ್ಷಿಕಾ ಪೂಣಚ್ಚ ಹೇಳಿದ್ದೇನು..?

263
firstsuddi

ಬೆಂಗಳೂರು: ಮೀ ಟೂ ಬಗ್ಗೆ ನಟಿ ಹರ್ಷಿಕಾ ಪೂಣಚ್ಛ ಟ್ವಿಟ್ಟರ್ ನಲ್ಲಿ ಮತ್ತೊಂದು ಪತ್ರ ಪೋಸ್ಟ್ ಮಾಡಿದ್ದು, ನನಗೂ ನನ್ನ ಸಿನಿಮಾ ಕೆರಿಯರ್ ನಲ್ಲಿ ಹಲವರು ಕಮಿಟ್ ಕೇಳಿದ್ದಾರೆ. ನಾನು ಅದನ್ನ ಅಲ್ಲೆ ಧಿಕ್ಕರಿಸಿ ಬಂದಿದ್ದೇನೆ. ಇದರಿಂದಾಗಿ ಚಿತ್ರರಂಗದ ಹಲವು ದಿಗ್ಗಜರ ಜೊತೆ ನನಗೆ ಅವಕಾಶಗಳು ತಪ್ಪಿವೆ. ನನ್ನ ವ್ಯಕ್ತಿತ್ವದ ಬಗ್ಗೆ ಬೆರಳು ಮಾಡಿ ತೋರಿಸುವಂತಿಲ್ಲ. ಯಾಕಂದ್ರೆ ನಾನು ಇಲ್ಲಿವರೆಗೂ ಪ್ಯೂರ್ ಮತ್ತು ಕ್ಲೀನ್ ಆಗಿದ್ದೇನೆ. ಗಂಡಸರು ಕೆಟ್ಟವರಿದ್ದಾರೆ ಮತ್ತು ಮಹಿಳೆಯರಿಗೆ ಕೆಲಸ ಕೊಡಲು ತಮ್ಮ ಅನುಕೂಲಗಳಿಗೆ ಒಪ್ಪಿಕೊಳ್ಳುವಂತೆ ಒತ್ತಾಯಿಸುತ್ತಾರೆ.ಆದರೆ ಯಾರೂ ನೀವು ಇಷ್ಟಪಡದ ಕೆಲಸವನ್ನು ಮಾಡಿಸಲು ನಿಮ್ಮ ಮೇಲೆ ಹಲ್ಲೆ ಮಾಡಲ್ಲ.ನಿಮ್ಮನ್ನ ರೇಪ್ ಮಾಡಲ್ಲ. ಯಾವಾಗಲು ನೀವು ಗಟ್ಟಿಯಾಗಿ ಆಗಲ್ಲ ಅಂತ ಹೇಳಿ ಅಲ್ಲಿಂದ ಹೊರಟು ಹೋಗಬಹುದು. ಎರಡು ಕೈಗಳಿಂದ ತಟ್ಟಿದರಷ್ಟೇ ಚಪ್ಪಾಳೆ ಆಗುತ್ತದೆ.ಹೀಗಾಗಿ ಎಲ್ಲಾ  ನಟಿಯರಿಗೂ ಚಿತ್ರರಂಗದಲ್ಲಿರುವ ಎಲ್ಲಾ ಮಹಿಳೆಯರಿಗೂ ನನ್ನ ಮನವಿ ನೀವು ರಿಯಲ್ ಆಗಿರಿ.ಇದು ಗಂಡಸರಿಗೂ ಮೀ ಟೂ ಅಭಿಯಾನ ಶುರು ಮಾಡಲು ಸರಿಯಾದ ಸಮಯ ಎಂದು ಹರ್ಷಿಕಾ ಪೂಣಚ್ಚ ಆವರು ಟ್ವೀಟ್ ಮೂಲಕ ತಿಳಿಸಿದ್ದಾರೆ.