ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ನಿಧನಕ್ಕೆ ಕಂಬನಿ ಮಿಡಿದ ಡಿಸಿಪಿ ಅಣ್ಣಾಮಲೈ…

469
firstsuddi

ಬೆಂಗಳೂರು:  ಕರ್ನಾಟಕ ಸಿಂಗಂ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರು ಹೆಚ್1ಎನ್1 ಖಾಯಿಲೆಯಿಂದ ಶುಕ್ರವಾರ ನಿಧನರಾಗಿದ್ದು, ಮಧುಕರ್ ಶೆಟ್ಟಿ ಅವರ ನಿಧನಕ್ಕೆ ಡಿಸಿಪಿ ಅಣ್ಣಾಮಲೈ ಅವರು ಕಂಬನಿ ಮಿಡಿದಿದ್ದಾರೆ. ಮಧುಕರ್ ಶೆಟ್ಟಿ ಅವರು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ. ಅವರು ಚಿಕ್ಕಮಗಳೂರಿನಲ್ಲಿ ಭೂ ಒತ್ತುವರಿಯಾದಾಗ  ಒಂದು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದರು. ನಿಮ್ಮ ಆಲೋಚನೆಗಳನ್ನೆಲ್ಲಾ ನಮಗೆ ನೀಡಿ ಹೋಗಿದ್ದೀರಾ. ನಾವು ನಿಮ್ಮ ದಾರಿಯಲ್ಲೇ ಸಾಗುವೆವು ಎಂದು ಡಿಸಿಪಿ ಅಣ್ಣಾಮಲೈ ಅವರು ತಿಳಿಸಿದ್ದಾರೆ.