ಮಧುಕರ್ ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಗುಪ್ತಶೆಟ್ಟಿಹಳ್ಳಿ ಗ್ರಾಮಸ್ಥರು…

493

ಚಿಕ್ಕಮಗಳೂರು : ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಮಧುಕರ್ ಶೆಟ್ಟಿ ನಿಧನ ಹಿನ್ನೆಲೆ ಗುಪ್ತಶೆಟ್ಟಿಹಳ್ಳಿ ಗ್ರಾಮಸ್ಥರು ಮಧುಕರ್ ಶೆಟ್ಟಿ ಅವರ  ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮೂಡಿಗೆರೆಯ ಸಾರಗೋಡು ಮೀಸಲು ಅರಣ್ಯದಿಂದ 32 ಕುಟುಂಬಗಳನ್ನು ಒಕ್ಕಲೆಬ್ಬಿಸಲಾಗಿದ್ದ ಸಂದರ್ಭದಲ್ಲಿ  ನಿರಂತರ ಹೋರಾಟದ ಮೂಲಕ ಮಧುಕರ್ ಶೆಟ್ಟಿ ಅವರ ಸಹಾಯದಿಂದ 2006ರಲ್ಲಿ ನಿರಾಶ್ರಿತರಿಗೆ ಭೂಮಿ ವಸತಿ ಕಲ್ಪಿಸಿಕೊಟ್ಟಿದ್ದರು ಹಾಗೂ  ಒತ್ತುವರಿ ಮಾಡಿದ್ದ ಪ್ರಭಾವಿ ವ್ಯಕ್ತಿಯ ಭೂಮಿಯನ್ನು ವಶಪಡಿಸಿಕೊಂಡಿದ್ದರು.  ಅಂತಹ ಪ್ರಾಮಾಣಿಕ ಅಧಿಕಾರಿ ಸಿಗುವುದು ಬಲು ಅಪರೂಪ ಎಂದು  ಮಧುಕರ್ ಶೆಟ್ಟಿ ಅವರು ಕಷ್ಟದಲ್ಲಿ  ಮಾಡಿದ ಸಹಾಯ ನೆನೆದು  ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.