WhatsApp ಮೇಸೆಜಿಂಗ್ ಅಪ್ಲಿಕೇಶನ್ ಇನ್ನು ಮುಂದೆ ಕೆಲವು ಫೋನ್ ಗಳಲ್ಲಿ ತನ್ನ ಕಾರ್ಯಚಟುವಟಿಕೆಯನ್ನು ನಿಲ್ಲಿಸಲಿದೆ. ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸುವ ಸಲುವಾಗಿ ಫೇಸ್‍ಬುಕ್ ಮಾಲೀಕತ್ವದ ಚಾಟ್ ಮೆಸೆಂಜರ್ ಈಗ ಹೊಸದಾಗಿ ನವೀಕರಿಸಲ್ಪಡುತ್ತಿದೆ. ಆದ್ದರಿಂದ ಇನ್ನು ಮುಂದೆ ಆಂಡ್ರಾಯ್ಡ್ 2.3.3 ಕ್ಕಿಂತ ಹಳೆಯದು, ವಿಂಡೋಸ್ ಫೋನ್ 8.0 ಮತ್ತು ಹಳೆಯದು,ಐಫೋನ್ 3 ಜಿಎಸ್ / ಐಒಎಸ್ 6,ನೋಕಿಯಾ ಸಿಂಬಿಯಾನ್ ಎಸ್ 60, ಬ್ಲ್ಯಾಕ್ಬೆರಿ ಓಎಸ್ ಮತ್ತು ಬ್ಲ್ಯಾಕ್ಬೆರಿ 10 ಗಳಲ್ಲಿ ಸರ್ವೀಸ್ ನಿಲ್ಲಿಸಲಿದೆ. ಈ ಕುರಿತಾಗಿ WhatsApp ಈ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಇನ್ನು ಮುಂದೆ ಸಕ್ರಿಯವಾಗಿ ಅಭಿವೃದ್ದಿಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ಯಾವುದೇ ಸಮಯದಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬಹುದು ಎಂದು WhatsApp ಸಂಸ್ಥೆ ಮೂಲಗಳು ತಿಳಿಸಿವೆ.