ಯಾವ ಮುಖ್ಯಮಂತ್ರಿಗಳು ಕೂಡ ಹೀಗೆ ಮಾತನಾಡಿರಲಿಲ್ಲ.- ಬಿ.ಎಸ್ ಯಡಿಯೂರಪ್ಪ..

298
firstsuddi

ಹುಬ್ಬಳ್ಳಿ- ಕರ್ನಾಟಕ ಏಕೀಕರಣದ ಬಳಿಕ ಯಾವ ಮುಖ್ಯಮಂತ್ರಿಗಳೂ ಕೂಡ ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕ ಎಂಬ ಮಾತನ್ನು ಹೇಳಿರಲಿಲ್ಲ. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇದನ್ನು ಪದೇ ಪದೇ ಹೇಳುತ್ತಿದ್ದು, ಉತ್ತರ ಕರ್ನಾಟಕ ,ದಕ್ಷಿಣ ಕರ್ನಾಟಕ ಎಂಬ ಹೇಳಿಕೆಗೆ ದೇವೇಗೌಡರು ಒಂದು ಶಬ್ದವನ್ನು ಮಾತನಾಡಲಿಲ್ಲ. ಕುಮಾರಸ್ವಾಮಿ ಅವರು ತಂದೆಯ ಒಪ್ಪಿಗೆ ಮೇರೆಗೆ ಹೀಗೆ ಮಾತನಾಡುತ್ತಿದ್ದಾರೆ. ಹಾಗೂ ಮಾಧ್ಯಮ ಮಿತ್ರರಿಗೆ ಉತ್ತರ ಕರ್ನಾಟಕ ಪ್ರತ್ಯೇಕತೆಗೆ ಬೆಂಕಿ ಹಚ್ಚುತ್ತಿರುವುದು ನೀವು ಎಂದು ಹಗುರವಾಗಿ ಮಾತನಾಡುತ್ತಿರುವುದು ಸರಿಯಲ್ಲ ಎಂದು ಬಿ.ಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ.