ಬೆಂಗಳೂರು-ಪ್ರತ್ಯೇಕ ರಾಜ್ಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ನೆಲ, ಜಲ, ಭಾಷೆ ವಿಷಯವಾಗಿ ವಿಭಜನೆ ಸರಿಯಲ್ಲ ರಾಜ್ಯದ ನೆಲ,ಜಲಕ್ಕಾಗಿ ಹೋರಾಟ ಮಾಡಿದವರು ನಾವು,ಈಗ ಪ್ರತ್ಯೇಕ ರಾಜ್ಯಕ್ಕೆ ಸಂಬಂಧಿಸಿದಂತೆ ಮಾತನಾಡುವುದು ಸರಿಯಲ್ಲ ,ಹಿಂದುಳಿದಿರುವ 114 ತಾಲೂಕುಗಳ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರಿನಲ್ಲಿ ತಿಳಿಸಿದ್ದಾರೆ.