ಬೆಂಗಳೂರು : ಎಸಿಬಿ ರಚನೆಯ ಸಂದರ್ಭದಲ್ಲೇ ನಾವು ಅದರ ಹಿಂದಿನ ದುರಾಲೋಚನೆಯನ್ನ ಊಹಿಸಿದ್ವಿ. ಅಂದಿಂದು ಪೂರ್ತಿ ನಿಜವಾಗಿದೆ, ಎಸಿಬಿಯಂದ್ರೆ ಅಪ್ಪಟ ಕಾಂಗ್ರೆಸ್ ಬ್ಯುರೋ ಅಂತ ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.ಸರಕಾರ ಲೋಕಾಯುಕ್ತಕ್ಕೆ ಪೂರಕವಾಗಿ ಮತ್ತೊಂದು ಸಂಸ್ಥೆಯನ್ನು ರಚಿಸುವಾಗ ಅದರ ಉದ್ದೇಶ ಮಹತ್ವದ್ದಾಗಿರಬೇಕಿತ್ತು. ಎಸಿಬಿ ರಚನೆ ಹಿಂದಿನ ಕೆಟ್ಟ ಉದ್ದೇಶವನ್ನ ನಾವು ಆಗಲೇ ತಿಳಿದಿದ್ದೇವು. ಇಂದಿನ ಎಸಿಬಿ ರಾಜ್ಯ ಕಾಂಗ್ರೆಸ್ ಸರಕಾರದ ಸೇಡಿನ ರಾಜಕಾರಣದ ಒಂದು ಸಾಧನವಾಗಿದೆ ಎಂದಿದ್ದಾರೆ.
ಎಸಿಬಿ ಇರೋದೆ ಕಾಂಗ್ರೆಸ್ನವರಿಗೆ ಯದ್ವಾ-ತದ್ವಾ ಸ್ಪೀಡಲ್ಲಿ ಕ್ಲೀನ್ ಚಿಟ್ ಕೊಡುವುದಕ್ಕೆ ಎಂದು ವ್ಯಂಗ್ಯವಾಡಿದ್ದಾರೆ. ಜೊತೆಗೆ ವಿರೋದ ಪಕ್ಷ ಅದರಲ್ಲೂ ಬಿಜೆಪಿ ನಾಯಕರ ವಿರುದ್ಧ ಬೇಕಾದ ರೀತಿಯಲ್ಲಿ ಕೇಸುಗಳನ್ನು ದಾಖಲಿಸಿ, ಹಿಂಸೆ ಕೊಡೋದಕ್ಕೆ ಎಂದಿದ್ದಾರೆ.