ರಕ್ತಹೀನತೆಯಲ್ಲಿ ವಿಶ್ವದಲ್ಲಿಯೇ ಭಾರತ ದೇಶದ ಮಹಿಳೆಯರು ನಂಬರ್ 1..!

514

ನವದೆಹಲಿ: ಭಾರತದ ಮಹಿಳೆಯರು ವಿಶ್ವದಲ್ಲಿ ಬೃಹತ್ ಸಂಖ್ಯೆಯ ರಕ್ತಹೀನತೆ ಹೊಂದಿರುವ ಮಹಿಳೆಯರ ದೇಶವೆಂದು ಒಂದೆಡೆ ಗುರುತಿಸಲ್ಪಟ್ಟಿದ್ದರೆ ಇನ್ನೊಂದೆಡೆ ಸ್ಥೂಲಕಾಯಕ್ಕೆ ಸಂಬಂಧಪಟ್ಟ ರೋಗಗಳು ಹೆಚ್ಚಾಗಿ ಇಲ್ಲಿನ ಸ್ತ್ರೀಯರನ್ನು ಕಾಡುತ್ತಿದೆ ಎಂದು ವರದಿಯೊಂದು ತಿಳಿಸಿದೆ. ನೂತನ ಜಾಗತಿಕ ಪೌಷ್ಠಿಕಾಂಶ ವರದಿ-2017ರಲ್ಲಿ ಭಾರತದ 15 ರಿಂದ 49 ವಯೋಮಾನದ ಮಹಿಳೆಯರು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದೆ.

ಇದು ವಿಶ್ವದಲ್ಲೇ ಅತ್ಯಧಿಕ ಪ್ರಮಾಣದ್ದು ಎಂದು ವಿಶ್ಲೇಷಿಸಲಾಗಿದೆ. ಕಳೆದ ವರ್ಷದ ವರದಿಯಲ್ಲಿ ಭಾರತದಲ್ಲಿ ಶೇ.48ರಷ್ಟು ರಕ್ತಹೀನತೆಯ ಮಹಿಳೆಯರಿದ್ದರು. ಈ ವಯೋಮಾನದವರಲ್ಲಿ ಭಾರತದಲ್ಲೇ ಅಧಿಕ ಪ್ರಮಾಣದ ರಕ್ತದ ಕೊರತೆ ಕಂಡುಬಂದಿದೆ. ನಂತರದ ಸ್ಥಾನದಲ್ಲಿ ಚೀನಾ, ಪಾಕಿಸ್ತಾನ, ನೈಜೀರಿಯಾ ಮತ್ತು ಇಂಡೋನೆಷ್ಯಾ ದೇಶಗಳಿವೆ. ಒಟ್ಟು 140 ದೇಶಗಳ ವಿವರಗಳನ್ನು ಈ ವರದಿಯಲ್ಲಿ ತಿಳಿಸಲಾಗಿದೆ

LEAVE A REPLY

Please enter your comment!
Please enter your name here