ಯಡಿಯೂರಪ್ಪ ಅವರಿಗೆ ಸುಳ್ಳು ಹೇಳುವುದು ಬಿಟ್ಟು ಮತ್ತೇನೂ ಗೊತ್ತಿಲ್ಲ: ಸಿದ್ದರಾಮಯ್ಯ…

376
firstsuddi

ಬಾಗಲಕೋಟೆ: ಮಂಗಳವಾರ 3ಗಂಟೆ ನಂತರ ಸರ್ಕಾರ ಏನಾಗಲಿದೆ ಎಂದು ಕಾದು ನೋಡಿ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಯಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಅವರಿಗೆ ಸುಳ್ಳು ಹೇಳುವುದು ಬಿಟ್ಟು ಮತ್ತೇನೂ ಗೊತ್ತಿಲ್ಲ. ಅವರು ಎಷ್ಟು ಶಾಕ್ಗಳನ್ನು ಕೊಟ್ಟರು? ಶಾಕ್ ಹೊಡೆದರೆ ಯಡಿಯೂರಪ್ಪ ಅವರಿಗೇ ಹೊಡೆಯಬೇಕು. ಶಾಕ್ ನಮಗೆ ಹೊಡೆಯುವುದಿಲ್ಲ. ಸರ್ಕಾರ ಬಿದ್ದು ಹೋಗಲಿದೆ ಎಂದು ಎಷ್ಟು ಬಾರಿ ಅವರು ಹೇಳಿದ್ದಾರೆ ಸರ್ಕಾರವೇನಾದರೂ ಬಿತ್ತೇ? ಯಡಿಯೂರಪ್ಪ ಅವರು ಒಬ್ಬ ಸುಳ್ಳುಗಾರ ಅವರ ಮಾತಿಗೆ ಕಿಮ್ಮತ್ತು ಕೊಡುವ ಅಗತ್ಯವಿಲ್ಲ ಎಂದಿದ್ದಾರೆ.