ಶಾಲಾ ವಾಹನ ದುರ್ಬಳಕೆಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರ ಆಗ್ರಹ…

326
firstsuddi

ಮೂಡಿಗೆರೆ :ಶಾಲಾ ವಾಹನವನ್ನು ಬೇರೆ ಉದ್ದೇಶಗಳಿಗೆ ಬಳಸುವಂತಿಲ್ಲ ಎಂಬ ಆದೇಶವಿದ್ದರೂ ಆದೇಶವನ್ನು ಉಲ್ಲಂಘಿಸಿ ಶಾಲಾವಾಹನವನ್ನು ಪ್ರವಾಸಕ್ಕೆ ತಂದ ಘಟನೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಸೋಮವಾರ ಸಂಜೆ ನಡೆದಿದ್ದು, ಪ್ರವಾಸಿ ತಾಣಗಳ ಕೊಂಡಿಯಾದ ಕೊಟ್ಟಿಗೆಹಾರದಲ್ಲಿ ಶಾಲಾ ರಜಾದಿನಗಳು ಬಂತೆಂದರೆ ಹತ್ತಾರು ಶಾಲಾವಾಹನಗಳು ಪ್ರವಾಸಕ್ಕೆ ಬಂದು ಬಿಡುತ್ತವೆ. ಸೋಮವಾರ ಸಂಜೆ ಹಾಸನದ ಖಾಸಗಿ ಆಂಗ್ಲ ಶಾಲೆಯ ಶಾಲಾ ವಾಹನವೊಂದು ಕುಟುಂಬದೊಡನೆ ಧರ್ಮಸ್ಥಳ ಹೊರನಾಡು ಪ್ರವಾಸ ಮುಗಿಸಿ ಬಂದಿದ್ದು ಕೊಟ್ಟಿಗೆಹಾರದಲ್ಲಿ ಸೋಮವಾರ ಕಂಡು ಬಂತು. ಸಾರಿಗೆ ನಿಯಮವನ್ನು ಗಾಳಿಗೆ ತೂರಿ ಶಾಲಾವಾಹನಗಳು ಬೇರೆ ಉದ್ದೇಶಗಳಿಗೆ ಬಳಕೆಯಾಗುತ್ತಿರುವುದು ಸಾರ್ವಜನಿಕ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.ಇನ್ನಾದರೂ ಸಾರಿಗೆ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಶಾಲಾ ವಾಹನ ದುರ್ಬಳಕೆಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.