ಅಕಾಲಿಕವಾಗಿ ಮೃತಪಟ್ಟ ನಾಲ್ವರು ಪತ್ರಕರ್ತರ ಕುಟುಂಬಕ್ಕೆ ತಲಾ 5ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ…

213
firstsuddi

ಬೆಂಗಳೂರು : ಅಕಾಲಿಕವಾಗಿ ಮೃತಪಟ್ಟಿರುವ ಪತ್ರಕರ್ತರ ಕುಟುಂಬಗಳಿಗೆ ರಾಜ್ಯ ಸರ್ಕಾರ ಪರಿಹಾರವನ್ನು ಘೋಷಿಸಿದೆ. ಇತ್ತೀಚೆಗೆ ಮೃತಪಟ್ಟ ಕ್ರೀಡಾ ಪತ್ರಕರ್ತ ದಿಗಂಬರ್ ಗರುಡಾ, ಟಿವಿ ನಿರೂಪಕರಾಗಿದ್ದ ಗಜಾನನ ಹೆಗಡೆ, ರಾಜಕೀಯ ವರದಿಗಾರ ರವಿರಾಜ್ ವಳಲಂಬೆ, ವರದಿಗಾರ ರೋಹಿತ್ ಬಿ.ಆರ್ ಅವರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರವನ್ನು ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆದೇಶ ಹೊರಡಿಸಿದ್ದಾರೆ. ಇಂದು ಬೆಳಿಗ್ಗೆ ಹಿರಿಯ ಪತ್ರಕರ್ತರು ಹಾಗೂ ರಾಜಕೀಯ ವರದಿಗಾರ ನಿಯೋಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಇತ್ತೇಚೆಗೆ ಅಕಾಲಿಕವಾಗಿ ಮೃತಪಟ್ಟ ನಾಲ್ವರು ಪತ್ರಕರ್ತರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಲಾಗಿತ್ತು. ಪತ್ರಕರ್ತರ ಮನವಿಯನ್ನು ಪರಿಗಣಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೂಡಲೇ ಮೃತರ ಕುಟುಂಬಕ್ಕೆ 5 ಲಕ್ಷ ರೂ ನೆರವು ನೀಡುವಂತೆ ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಪರಿಹಾರದ ಮೊತ್ತ ಕೂಡಲೇ ಮೃತರ ಕುಟುಂಬಕ್ಕೆ ತಲುಪುವಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ನಿರ್ದೇಶಿಸಿದ್ದಾರೆ.