ಮೈಸೂರು : ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶ ಮೂಲದ ಇಬ್ಬರು ಯುವಕರನ್ನು ನಂಜನಗೂಡು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಭಾಂಗ್ಲದೇಶದ ಸಾತ್ಕಿರ ಜಿಲ್ಲೆಯ ಸಾಮ್ ನಗರದ ಶಿರ್ಗುಲ್ ಘಾಟ್ ನಿವಾಸಿಗಳಾದ ಮೊಹಮ್ಮದ್ ಹಬೀಬುಲ್ಲಾ(23) ಹಾಗೂ ಮೊಹಮ್ಮದ್ ಅಬ್ದುಲ್ಲಾ(27) ಎಂದು ಗುರುತಿಸಲಾಗಿದ್ದು, ಇವರು ಕಳೆದ ಒಂದು ವರ್ಷದಿಂದ ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದಲ್ಲಿ ವಾಸವಿದ್ದು, ತಾಂಡವಪುರ ಕೈಗಾರಿಕಾ ಪ್ರದೇಶದಲ್ಲಿರುವ ರಿಷಿ ಫ್ಯಾಭ್ರಿಕ್ನಲ್ಲಿ ಉದ್ಯೋಗಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರಿಬ್ಬರ ಮೇಲಿನ ಅನುಮಾನದಿಂದ ಪೊಲೀಸರು ಪರಿಶೀಲನೆ ನಡೆಸಿ ಇವರಿಬ್ಬರ ಬಳಿ ಯಾವುದೇ ಪಾಸ್ಪೋರ್ಟ್, ವೀಸಾ ಇಲ್ಲದೆ ಇದ್ದುದರಿಂದ ಪೊಲೀಸರು ಪಾಸ್ಪೋರ್ಟ್ ಕಾಯ್ದೆ 1976 ಹಾಗೂ ಭಾರತೀಯ ವಿದೇಶಿಯರ ಕಾಯ್ದೆ 1646ರ ಅಡಿಯಲ್ಲಿ ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.










