ಅಕ್ಕಿಕಾಳಿನಲ್ಲಿ ನಾಡಗೀತೆ ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ ಯುವಕ…

51
firstsuddi

ಹಾವೇರಿ: ತಾಲೂಕಿನ ಗುಡಿಸಲಕೊಪ್ಪ ಗ್ರಾಮದ ಯುವಕನೊಬ್ಬ ಮೈಕ್ರೋ ಆರ್ಟ್ ಮೂಲಕ ಇಂಡಿಯಾ ಬುಕ್ ಆಫ್
ರೆಕಾರ್ಡ್ ಸಾಧನೆ ಮಾಡಿದ್ದಾನೆ.

ಗ್ರಾಮದ ಪರಮೇಶ ಬಂಡಿ ಎಂಬ ಯುವಕ ಅಕ್ಕಿಕಾಳಿನಲ್ಲಿ ನಾಡಗೀತೆ ಬರೆದು ಈ ಸಾಧನೆ ಮಾಡಿದ್ದಾನೆ. 80 ನಿಮಿಷದಲ್ಲಿ 144 ಅಕ್ಕಿಕಾಳಿನಿಂದ ನಾಡಗೀತೆ ಬರೆದು ವರ್ಲ್ಡ್ ರೆಕಾರ್ಡ್ ಆಫ್ ಇಂಡಿಯಾ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪಡೆಯುವ ಮೂಲಕ ಹೊಸ ಇತಿಹಾಸ ಬರೆದಿದ್ದಾನೆ.

ಅಷ್ಟೇ ಅಲ್ಲದೇ 92 ಅಕ್ಕಿಕಾಳಿನಲ್ಲಿ ವಂದೇ ಮಾತರಂ ಗೀತೆ ಬರೆದಿದ್ದಾನೆ. ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಗೆ 10 ರಿಂದ 20 ಸಾವಿರ ಅಕ್ಕಿಕಾಳಿನಲ್ಲಿ ಜೈ ಶ್ರೀ ರಾಮ್ ಎಂದು ಬರೆಯಲು ತಯಾರಿ ನಡೆಸಿದ್ದಾನೆ. ಈ ಮೈಕ್ರೋ ಆರ್ಟ್ ಕಲಾವಿದನ ಸಾಧನೆ ನಿಜಕ್ಕೂ ನೋಡುಗರ ಗಮನ ಸೆಳೆಯುತ್ತಿದೆ.