ನವದೆಹಲಿ : ಜಿಯೋ ತನ್ನ ಚಂದಾದಾರರಿಗೆ ವಿಶ್ವದಲ್ಲಿಯೇ ಅತೀ ಅಗ್ಗದ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ.
ನಿನ್ನೆ ರಾತ್ರಿಯಿಂದ ಜಾರಿಯಾಗುವಂತೆ ಈ ಯೋಜನೆ ಪರಿಚಯಿಸಿದ್ದು, 1 ರೂಪಾಯಿಯ ಯೋಜನೆ 100 ಎಂಬಿ 4 ಜಿ ಡೇಟಾದೊಂದಿಗೆ 30 ದಿನಗಳ ಮಾನ್ಯತೆಯನ್ನು ಹೊಂದಿರುತ್ತದೆ. ಇದು 64 ಕೆಬಿಪಿಎಸ್ ವೇಗದಲ್ಲಿ ಬ್ರೌಸ್ ಆಗಲಿದೆ ಎಂದು ಜಿಯೋ ಹೇಳಿದೆ.
ಈ ಯೋಜನೆ ಮೈಜಿಯೋ ಅಪ್ಲಿಕೇಶನ್ ನಲ್ಲಿ ಮಾತ್ರ ಗೋಚರವಾಗಲಿದ್ದು, ಜಿಯೋ ವೆಬ್ ಸೈಟ್ ಅಥವಾ ಇತರ ರೀಚಾರ್ಜ್ ಪೋರ್ಟಲ್ ಗಳಲ್ಲಿ ಗೋಚರಿಸುವುದಿಲ್ಲ ಎಂದು ಜಿಯೋ ಹೇಳಿದೆ.










