ತುಮಕೂರು : ನಾಯಿಯೊಂದು ಹಸುವಿನ ಕರುವಿಗೆ ಹಾಲುಣಿಸುತ್ತಿರುವ ಅಪರೂಪದ ಸನ್ನಿವೇಶ ತಾಲೂಕಿನ ಕುಂದೂರು ಗ್ರಾಮದಲ್ಲಿ ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.
ಈ ನಾಯಿ ಹಾಗೂ ಕರು ಕುಂದೂರಿನ ಬಸವರಾಜ-ಗೀತಾ ದಂಪತಿಯ ಸಾಕು ಪ್ರಾಣಿಗಳು. ನಾಯಿಯ ಕೆಚ್ಚಲಿಗೆ ಕರು ಬಾಯಿ ಹಾಕಿ ಹಾಲು ಕುಡಿಯುತ್ತಿದ್ದರೆ, ಇತ್ತ ನಾಯಿ ಕರುವಿನ ಮೈ ಸವರಿ ತಾಯಿ ವಾತ್ಸಲ್ಯ ತೋರಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.










