ಅಪ್ಪ ಮಕ್ಕಳು ಹಾಗೂ ಸೊಸೆಯಂದಿರ ಕಾಟಾ ಸಾಕಾಗಿತ್ತು, ಈಗಾ ಮೊಮ್ಮಕ್ಕಳ ಕಾಟಾ ಶುರುವಾಗಿದೆ : ಬಿ.ಎಸ್.ಯಡಿಯೂರಪ್ಪ

192
firstsuddi

ಹಾಸನ : ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಅಪ್ಪ ಮಕ್ಕಳು ಹಾಗೂ ಸೊಸೆಯಂದಿರ ಕಾಟಾ ಸಾಕಾಗಿತ್ತು. ಈಗಾ ಮೊಮ್ಮಕ್ಕಳ ಕಾಟಾ ಶುರುವಾಗಿದೆ. ಈ ದಬ್ಬಾಳಿಕೆ ಆಟ ಕೊನೆಗಾಣಿಸೋ ಜವಾಬ್ದಾರಿ ನಿಮ್ಮ ಮೇಲಿದೆ. ಲೂಟಿ ಮಾಡಲು ಈ ಸರ್ಕಾರಕ್ಕೆ ಯಾವುದೇ ಸಂಕೋಚವಿಲ್ಲ. ಸಿಎಂ ಆದ 24 ಗಂಟೆಯೊಳಗೆ ರೈತರ ಸಾಲಮನ್ನಾ ಮಾಡುತ್ತೀವಿ ಎಂದು ಹೇಳಿದ್ದರು. ಆದರೆ ಹತ್ತು ತಿಂಗಳಾದರೂ ಸಾಲಮನ್ನಾ ಆಗಿರುವುದು ಕೇವಲ ನಾಲ್ಕುವರೆ ಸಾವಿರ ಕೋಟಿ. ಯಾವುದೇ ಅಭಿವೃದ್ಧಿ ಆಗದೆ ಈ ಸರ್ಕಾರ ಬದುಕಿದ್ದು ಸತ್ತಂತಾಗಿದೆ. ಕುಮಾರಸ್ವಾಮಿ ಅವರು ಒಬ್ಬ ಸಿಎಂ ಆಗಿ ಪುಲ್ವಾಮ ದಾಳಿ ಬಗ್ಗೆ ಗೊತ್ತಿದ್ದರೂ ಹೇಳದಿರುವುದು ದೇಶದ್ರೋಹ ಅಲ್ಲವೇ? ಒಬ್ಬ ಬೇಜವಾಬ್ದಾರಿ ಸಿಎಂ ಏನು ಬೇಕಾದರೂ ಮಾತನಾಡುತ್ತಾರೆ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ? ಎಂದರು.