ಬೆಂಗಳೂರು : ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಮೋದಿ ಸರ್ಕಾರ ಅಧಿಕಾರಕ್ಕೆ ಬಂದರೆ ಒಳ್ಳೆಯದು ಎಂದು ಹೇಳಿರುವ ಮಾತಿಗೆ ಪ್ರತಿಕ್ರಯಿಸಿದ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ವಿರೋಧ ಪಕ್ಷದವರೆಲ್ಲ ಪಾಕಿಸ್ತಾನದ ಜೊತೆಗೂಡಿ ನಮ್ಮನ್ನು ಅಧಿಕಾರದಿಂದ ಕಿತ್ತೊಗೆಯುವ ಸಂಚು ರೂಪಿಸಿದ್ದಾರೆ, ಪಾಕಿಸ್ತಾನಕ್ಕೇನು ಬೇಕೋ ವಿರೋಧ ಪಕ್ಷಗಳಿಗೂ ಅದೇ ಬೇಕು ಎಂದು ಇಷ್ಟು ದಿನ ಬಿಜೆಪಿ ಬಡಬಡಾಯಿಸುತ್ತಿತ್ತು. ಈಗ ಪಾಕಿಸ್ತಾನದ ಪ್ರಧಾನಿ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದು ಉತ್ತಮವೆಂದು ಹೇಳಿದ್ದಾರೆ. ಈಗ ಏನಿದರ ಅರ್ಥ? ಎಂದು ಟ್ವೀಟ್ ಮಾಡಿದ್ದಾರೆ.










