ಅಪ್ಪು ಅಭಿನಯದ ‘ಗಂಧದ ಗುಡಿ’ ಚಿತ್ರದ ಪ್ರಚಾರಕ್ಕೆ ಇಳಿದ ಕಾಫಿನಾಡು ಚಂದು…

109
firstsuddi

ಚಿಕ್ಕಮಗಳೂರು : ಸೋಷಿಯಲ್ ಮೀಡಿಯಾದಲ್ಲಿ ಹ್ಯಾಪಿ ಬರ್ತಡೇ ಹಾಡುಗಳ ಮೂಲಕ ಫೇಮಸ್ ಆಗಿರುವ ಕಾಫಿನಾಡು ಚಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಪ್ಪಟ ಅಭಿಮಾನಿ. ಸದ್ಯ ಅಪ್ಪು ಅಭಿನಯದ ಬಹುನಿರೀಕ್ಷಿತ ಗಂಧದ ಗುಡಿ ಸಿನಿಮಾ ಬಿಡುಗಡೆಗೆ  ಒಂದು ದಿನ ಬಾಕಿ ಇದೆ. ಇದೀಗ ಕಾಫಿನಾಡು ಚಂದು ತಮ್ಮ ತಲೆಯ ಹಿಂಭಾಗದ ಕೂದಲಿನಲ್ಲಿ ಗಂಧದ ಗುಡಿ ಎಂದು ಕೆತ್ತಿಸಿಕೊಂಡು ನಗರದಲ್ಲಿ ಓಡಾಡುತ್ತಾ ಚಿತ್ರಕ್ಕಾಗಿ ಪ್ರಚಾರ ನಡೆಸುತ್ತಿದ್ದಾರೆ. ಸದ್ಯ ಗಂಧದ ಗುಡಿ ಎಂದು ಬರೆಸಿಕೊಂಡು ಹೊಸ ಹೇರ್ ಸ್ಟೈಲ್ ನಲ್ಲಿ ಕಾಫಿನಾಡು ಚಂದು ಓಡಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.