ಹೈದರಾಬಾದ್ : ಅಪ್ರಾಪ್ತೆ ಮೇಲೆ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಕಳೆದ ತಿಂಗಳ 28ರಂದು ಇಬ್ಬರು ಸ್ನೇಹಿತರ ಜೊತೆ ಸೇರಿ ಬಾಲಕಿ ಜುಬಿಲಿ ಹಿಲ್ಸ್ ಪಬ್ ಗೆ ತೆರಳಿದ್ದಳು. ಈ ವೇಳೆ ಪಬ್ ನಲ್ಲಿ ಪರಿಚಯವಾಗಿರುವ ಇತರೆ ಕೆಲ ಸ್ನೇಹಿತರು ಮನೆಗೆ ಬಿಡುವುದಾಗಿ ಹೇಳಿ, ಆಕೆಯನ್ನ ಕಾರಿನಲ್ಲಿ ಹತ್ತಿಸಿಕೊಂಡಿದ್ದಾರೆ. ಈ ವೇಳೆ ಕಾರಿನಲ್ಲೇ ಆಕೆಯ ಮೇಲೆ ಅತ್ಯಾಚಾರವೆಸಲಾಗಿದೆ ಎಂದು ತಿಳಿದು ಬಂದಿದೆ.
ಮನೆಗೆ ಬಂದ ಬಾಲಕಿಯನ್ನ ತಂದೆ ಪ್ರಶ್ನೆ ಮಾಡಿದಾಗ ತನ್ನ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರದ ಬಗ್ಗೆ ಹೇಳಿಕೊಂಡಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ತಂದೆ ದೂರು ದಾಖಲು ಮಾಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ ಎಲ್ಲ ಅಪರಾಧಿಗಳು ಅಪ್ರಾಪ್ತರಾಗಿದ್ದು, ಓರ್ವ ರಾಜಕೀಯ ಪಕ್ಷದ ಮುಖಂಡರ ಪುತ್ರನಿದ್ದಾನೆಂದು ಹೇಳಲಾಗ್ತಿದೆ.










