ಅಮೇರಿಕಾ ನಿರ್ಮಿತ 8 ಅಪಾಚಿ ಹೆಲಿಕ್ಯಾಪ್ಟರ್ ಗಳು ಭಾರತೀಯ ವಾಯುಸೇನೆಗೆ ಸೇರ್ಪಡೆ…

366
firstsuddi

ಪಂಜಾಬ್ : ಭಾರತೀಯ ವಾಯುಸೇನೆಯ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಂದು ವಾಯುಸೇನೆಗೆ ಅಮೇರಿಕಾ ನಿರ್ಮಿತ 8 ಅಪಾಚಿ ಎಹೆಚ್-64ಇ(ಐ) ಹೆಲಿಕ್ಯಾಪ್ಟರ್ ಗಳನ್ನು ಪಠಾಣ್‍ಕೋಟ್ ವಾಯುನೆಲೆಯಲ್ಲಿ ಭಾರತೀಯ ವಾಯುಸೇನೆ ಮುಖ್ಯಸ್ಥ ಬಿ.ಎಸ್. ಧನೋವಾ ಅವರು ಭಾರತೀಯ ಸೇನೆಗೆ ಸೇರ್ಪಡೆ ಮಾಡಿಕೊಂಡರು. ಈ ವೇಳೆ ಮಾತನಾಡಿದ ವಾಯುಸೇನೆ ಮುಖ್ಯಸ್ಥ ಬಿ.ಎಸ್ ಧನೋವಾ ಅವರು, ಅತ್ಯಾಧುನಿಕ ಹೆಲಿಕ್ಯಾಪ್ಟರ್ ಗಳನ್ನು ಖರೀದಿಸುವ ಸಲುವಾಗಿ 2015ರ ಸೆಪ್ಟೆಂಬರ್‍ನಲ್ಲಿ ಅಮೇರಿಕಾದೊಂದಿಗೆ ಒಪ್ಪದ ಮಾಡಿಕೊಳ್ಳಲಾಗಿತ್ತು. ಒಪ್ಪಂದದ ಪ್ರಕಾರ ಅಮೇರಿಕಾ 22 ಹೆಲಿಕ್ಯಾಪ್ಟರ್ ಗಳನ್ನು ನೀಡಬೇಕಿತ್ತು. ಜುಲೈ 27ರಂದು 4 ಹೆಲಿಕ್ಯಾಪ್ಟರ್ ಗಳನ್ನು ಭಾರತಕ್ಕೆ ಹಸ್ತಾಂತರ ಮಾಡಿತ್ತು. ಇದೀಗಾ ಮತ್ತೆ 8 ಹೆಲಿಕ್ಯಾಪ್ಟರ್ ಗಳನ್ನು ಹಸ್ತಾಂತರ ಮಾಡಿದೆ. ಇನ್ನುಳಿದ ಹೆಲಿಕ್ಯಾಪ್ಟರ್ ಗಳು 2020ರ ವೇಳೆಗೆ ಭಾರತೀಯ ವಾಯುಪಡೆಗೆ ಸೇರಲಿದೆ ಎಂದು ತಿಳಿಸಿದರು.
ಈ ಹೆಲಿಕ್ಯಾಪ್ಟರ್ ಗಳು 30ಎಂಎಂ ಗನ್ ಹೊಂದಿದ್ದು, ಶತ್ರುಗಳ ನೆಲೆಗಳ ಮೇಲೆ ದಾಳಿ ನಡೆಸಿ ಧ್ವಂಸ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ಹೆಲಿಕ್ಯಾಪ್ಟರ್ ಗಳು ಬಿರುಗಾಳಿ ಹಾಗೂ ಭಾರಿ ಮಳೆ ಸೇರಿದಂತೆ ಯಾವುದೇ ಹವಾಮಾನದ ಪರಿಸ್ಥಿತಿಯಿದ್ದರೂ ಅಡೆತಡೆಯಿಲ್ಲದೆ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ. ರಾಕೆಟ್ ಮತ್ತು ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿದ್ದು, ನಿಖರವಾಗಿ ಹಾಗೂ ನಿರ್ದಿಷ್ಟ ಸ್ಥಳದ ಮೇಲೆ ಕ್ಷಿಪಣಿ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. ಇನ್ನು ಪರ್ವತದ ಪ್ರದೇಶಗಳಲ್ಲಿ, ಮಂಜಿನ ಪ್ರದೇಶಗಳಲ್ಲೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿರುವ ಅಪಾಚಿ ಹೆಲಿಕಾಪ್ಟರ್ ಗಳು ಗುಡ್ಡಗಾಡು ಹಾಗೂ ಬೆಟ್ಟ ಪ್ರದೇಶಗಳಲ್ಲಿನ ಕಡಿದಾದ ಪ್ರದೇಶದಲ್ಲೂ ಸುಲಭವಾಗಿ ಇಳಿಯುವ ಸಾಮರ್ಥ್ಯ ಹೊಂದಿದೆ.