ಆಂಧ್ರಪ್ರದೇಶದ ನಕ್ಷೆಗೆ 13 ಹೊಸ ಜಿಲ್ಲೆಗಳು ಸೇರ್ಪಡೆ…

83
firstsuddi

ಅಮರಾವತಿ : ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಇಂದು ತಮ್ಮ ಕ್ಯಾಂಪ್ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ 13 ಹೊಸ ಜಿಲ್ಲೆಗಳನ್ನು ಉದ್ಘಾಟಿಸಿದರು. ಇದರೊಂದಿಗೆ ಆಂಧ್ರಪ್ರದೇಶದ ಒಟ್ಟು ಜಿಲ್ಲೆಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.

13 ಹೊಸ ಜಿಲ್ಲೆಗಳ ರಚನೆಗೆ ಸಂಬಂಧಪಟ್ಟಂತೆ ಎಲ್ಲ ರೀತಿಯ ಪ್ರಕ್ರಿಯೆಗಳೂ ಈಗಾಗಲೇ ಮುಕ್ತಾಯಗೊಂಡಿವೆ. ಹಾಗೇ ಶನಿವಾರ ರಾತ್ರಿ ಗೆಜೆಟೆಡ್ ಅಧಿಸೂಚನೆ ಹೊರಡಿಸಿದ್ದ ಆಂಧ್ರಪ್ರದೇಶ ರಾಜ್ಯ ಸರ್ಕಾರ, ಸೋಮವಾರ ದಿಂದ ರಾಜ್ಯದಲ್ಲಿ ಹೊಸ ಜಿಲ್ಲೆಗಳು ಅಸ್ತಿತ್ವಕ್ಕೆ ಬರಲಿವೆ ಎಂದು ಹೇಳಿತ್ತು. ಅಂತೆಯೇ ಸಿಎಂ ಜಗನ್ ರೆಡ್ಡಿ ಇಂದು 13 ಜಿಲ್ಲೆಗಳನ್ನು ಉದ್ಘಾಟನೆ ಮಾಡಿದ್ದಾರೆ.

ಹೊಸದಾಗಿ ರಚನೆಯಾದ ಜಿಲ್ಲೆಗಳು ಇಂತಿವೆ: ಶ್ರೀ ಬಾಲಾಜಿ, ಅನ್ನಮಯ್ಯ, ಶ್ರೀ ಸತ್ಯಸಾಯಿ, ನಂದ್ಯಾಲ, ಬಾಪಟ್ಲ, ಪಲ್ನಾಡು, ಏಲೂರು, ಎನ್ ಟಿ ಆರ್, ಅನಕಾಪಲ್ಲಿ, ಕಾಕಿನಾಡ, ಕೋನ ಸೀಮಾ, ಮಾನ್ಯಂ, ಅಲ್ಲೂರಿ ಸೀತಾರಾಮ ರಾಜು.

ಜಗನ್ ಮೋಹನ್ ರೆಡ್ಡಿ 2019ರ ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, 25 ಲೋಕಸಭಾ ಕ್ಷೇತ್ರಗಳಲ್ಲಿ ಪ್ರತಿಯೊಂದನ್ನು ಜಿಲ್ಲೆಯನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು.