ಆಟೋಚಾಲಕರ ಮೇಲೆ ದರೋಡೆಕೋರರ ಅಟ್ಟಹಾಸ…

393
firstsuddi

ಬೆಂಗಳೂರು : ಆಟೋಚಾಲಕರ ಮೇಲೆ ದರೋಡೆಕೋರರು ಅಟ್ಟಹಾಸ ಮೆರೆದಿರುವ ಘಟನೆ ಬೆಂಗಳೂರಿನ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ. ನಿನ್ನೆ ರಾತ್ರಿ ದರೋಡೆಕೋರರು ಮೊಬೈಲ್ ಕಳುವಾಗಿದೆ ಮೊಬೈಲ್ ಕೊಡು ಎಂದು ಆಟೋ ಚಾಲಕನನ್ನು ಥಳಿಸಿದ್ದಾರೆ. ಈ ಸಂದರ್ಭದಲ್ಲಿ ಆಟೋ ಚಾಲಕ ಸುರೇಶ್ ಎಂಬುವವರು ಮೊಬೈಲ್ ನೀಡಲು ನಿರಾಕರಿಸಿದ್ದರಿಂದ ಆಟೋವನ್ನು ಕಲ್ಲಿನಿಂದ ಜಜ್ಜಿ ಪುಡಿ ಮಾಡಿದ್ದಾರೆ. ಈ ವೇಳೆ ಕೂಗಾಡುತ್ತಿದ್ದ ಸುರೇಶ್ ಅವರ ಧ್ವನಿ ಕೇಳಿಸಿಕೊಂಡ ಸ್ಥಳೀಯರು ಆಗಮಿಸಿ ಆಟೋ ಚಾಕನನ್ನು ರಕ್ಷಿಸಿದ್ದಾರೆ. ಘಟನೆ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.