ಆನೆ ದಂತದಲ್ಲಿ ಚೆಸ್ ಪಾನ್ ತಯಾರಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿ ಅರೆಸ್ಟ್…

92
firstsuddi

ಚಿಕ್ಕಮಗಳೂರು : ಆನೆ ದಂತದಲ್ಲಿ ಚದುರಂಗದ ಪಾನ್ ತಯಾರಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸಕಲೇಶಪುರ ಮೂಲದ ಮೆಲ್ವಿನ್ ಎಂಬಾತ ಆನೆ ದಂತದಿಂದ ನಿರ್ಮಿಸಿದ್ದ 16 ಕಪ್ಪು ಬಣ್ಣದ ಪಾನ್ ಗಳು ಹಾಗೂ 16 ಬಿಳಿ ಬಣ್ಣದ ಪಾನ್ ಗಳನ್ನ ಮಾರಾಟ ಮಾಡಲು ಯತ್ನಿಸುವಾಗ ನಗರದ ಸಂಚಾರಿ ಅರಣ್ಯ ದಳದ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಈ ವೇಳೆ ಆನೆ ದಂತದಿಂದ ಕೆತ್ತನೆ ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಜೊತೆ ಟ್ರೋಫಿಗೆ ಹಾಕಿದ್ದ ಜಿಂಕೆಯ ಕೊಂಬನ್ನು ವಶಕ್ಕೆ ಪಡೆದಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.