ಆರ್ಟಿಕಲ್ 370 ರದ್ದತಿ ಬಳಿಕ ಪ್ರತ್ಯೇಕವಾದಿಗಳು ಹಾಗೂ ಉಗ್ರರಿಗೆ ಶಾಕ್ ನೀಡಲು ಸಜ್ಜಾದ ಗೃಹ ಸಚಿವ ಅಮಿತ್ ಶಾ…

332
firstsuddi

ನವದೆಹಲಿ : ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ಮತ್ತು 35(ಎ)ನ್ನು ರದ್ದುಗೊಳಿಸಿ ಎಲ್ಲರೂ ಆತಂಕ ಪಡುವಂತೆ ಮಾಡಿದ್ದ ಗೃಹ ಸಚಿವ ಅಮಿತ್ ಶಾ ಅವರು ಪ್ರತ್ಯೇಕವಾದಿಗಳು ಹಾಗೂ ಉಗ್ರರಿಗೆ ಮತ್ತೊಂದು ಶಾಕ್ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಕಾಶ್ಮೀರದಲ್ಲಿ ಅತಿ ಹೆಚ್ಚು ಸೈನಿಕರನ್ನು ನಿಯೋಜಿಸಿ ಭದ್ರತೆಯನ್ನು ಹೆಚ್ಚಿಸುತ್ತಿರುವುದನ್ನು ನೋಡಿ ಪ್ರಧಾನಿ ನರೇಂದ್ರ ಮೋದಿಯವರು ಈ ಬಾರಿ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು ಕಾಶ್ಮೀರದಲ್ಲಿ ಧ್ವಜರೋಹಣ ಮಾಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಮೋದಿಯವರ ಬದಲು ಗೃಹ ಸಚಿವ ಅಮಿತ್ ಶಾ ಅವರು ಸ್ವಾತಂತ್ರ್ಯ ದಿನಾಚರಣೆಯಂದು ಕಾಶ್ಮೀರಕ್ಕೆ ತೆರಳಿ ಧ್ವಜರೋಹಣ ಮಾಡಲಿದ್ದಾರೆ ಹಾಗೂ ಈ ವೇಳೆ ರಾಷ್ಟ್ರೀಯಾ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದ್ದು, ಕಾಶ್ಮೀರದ ಪ್ರತ್ಯೇಕವಾದಿಗಳು ಹಾಗೂ ಸ್ಥಳೀಯ ನಾಯಕರು ಆರ್ಟಿಕಲ್ 370ರದ್ದಾದ ಬಳಿಕ ಅಸ್ಥಿತ್ವಕ್ಕಾಗಿ ಪರದಾಡುವಂತಾಗಿದ್ದು, ಈ ನಡುವೆ ಅಮಿತ್ ಶಾ ಅವರು ಧ್ವಜರೋಹಣ ಮಾಡಿದರೆ ಉಗ್ರರು ಹಾಗೂ ಪ್ರತ್ಯೇಕವಾದಿಗಳ ಆಟಗಳಿಗೆ ಬ್ರೇಕ್ ಹಾಕಿದಂತಾಗುತ್ತದೆ.