ಆಸ್ತಿ ವಿಚಾರ ; ತಂದೆ, ತಮ್ಮನಿಂದಲೇ ಅಣ್ಣನ ಹತ್ಯೆಗೆ ಯತ್ನ…

81
firstsuddi

ಕೊಪ್ಪಳ : ಆಸ್ತಿ ವಿಚಾರಕ್ಕೆ ತಂದೆ ಮತ್ತು ತಮ್ಮನಿಂದಲೇ ಅಣ್ಣನ ಹತ್ಯೆಗೆ ಯತ್ನ ನಡೆದಿರುವ ಘಟನೆ ಜಿಲ್ಲೆಯ ಕುಕನೂರು ತಾಲೂಕಿನ ನೆಲಜೇರಿ ಗ್ರಾಮದಲ್ಲಿ ನಡೆದಿದೆ.

ತಂದೆ ಚೆನ್ನಪ್ಪಗೌಡ ಹಾಗೂ ತಮ್ಮ ವೆಂಕಟೇಶ್ ಎಂಬುವವರು ಅನಿಲ್ ಕುಮಾರ್‍ ಕೊಲೆಗೆ ಯತ್ನಿಸಿದ ಆರೋಪಿಗಳು. ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ನಿನ್ನೆ ತಡರಾತ್ರಿ ತಂದೆ, ಮಕ್ಕಳ ನಡುವೆ ಗಲಾಟೆ ನಡೆದಿತ್ತು. ಗಲಾಟೆ ವಿಕೋಪಕ್ಕೆ ಹೋಗಿತ್ತು. ಆ ವೇಳೆ ಅನಿಲ್ ಮನೆ ಮೇಲೆ ತಂದೆ ಚೆನ್ನಪ್ಪಗೌಡ ಹಾಗೂ ತಮ್ಮ ವೆಂಕಟೇಶ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾರೆ. ಅದೃಷ್ಟವಶಾತ್ ಅನಿಲ್ ಕುಮಾರ್ ಹಾಗೂ ಅವರ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ.

ಈ ಸಂಬಂಧ ಅನಿಲ್ ಕುಮಾರ ಬೇವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಚೆನ್ನಪ್ಪಗೌಡ ಹಾಗೂ ವೆಂಕಟೇಶ್ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಶೋಧ ನಡೆಯುತ್ತಿದೆ.