ಇಂದಿನಿಂದ 12-14 ವರ್ಷದ ಮಕ್ಕಳಿಗೆ ಲಸಿಕೆ – ಇವತ್ತು ಮಹತ್ವದ ದಿನ ಎಂದು ಮೋದಿ ಟ್ವೀಟ್.

80
firstsuddi

ನವದೆಹಲಿ : ಇಂದಿನಿಂದ 12-14 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಜೊತೆಗೆ 60 ವರ್ಷ ಮೇಲ್ಪಟ್ಟವರಿಗೂ ಸಹ ಬೂಸ್ಟರ್ ಡೋಸ್ ನೀಡಲಾಗುತ್ತಿದ್ದು, ಮೊದಲ ದಿನ ಎಲ್ಲೆಡೆ ಮಕ್ಕಳು ಮತ್ತು ಹಿರಿಯರು ಲಸಿಕೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ನಾಗರಿಕರಿಗೆ ಲಸಿಕೆ ನೀಡುವ ಭಾರತದ ಪ್ರಯತ್ನದಲ್ಲಿ ಇಂದು ಪ್ರಮುಖ ದಿನವಾಗಿದೆ ಎಂದು ತಿಳಿಸಿದ್ದಾರೆ.

ನಮ್ಮ ದೇಶದ ನಾಗರಿಕರಿಗೆ ಲಸಿಕೆ ಹಾಕುವ ಭಾರತದ ಪ್ರಯತ್ನಗಳಲ್ಲಿ ಇಂದು ಪ್ರಮುಖ ದಿನವಾಗಿದೆ. 12-14 ವಯಸ್ಸಿನ ಯುವಕರೆಲ್ಲರೂ ಲಸಿಕೆಗೆ ಅರ್ಹರಾಗಿರುತ್ತಾರೆ. ಈ ವಯಸ್ಸಿನವರೆಲ್ಲರೂ ಲಸಿಕೆಯನ್ನು ಪಡೆದುಕೊಳ್ಳಬೇಕೆಂದು ನಾನು ಮನವಿ ಮಾಡುತ್ತೇನೆ. ಭಾರತದ ನೀತಿಗೆ ಅನುಗುಣವಾಗಿ ಲಸಿಕೆ ಮೈತ್ರಿ ಕಾರ್ಯಕ್ರಮದ ಅಡಿಯಲ್ಲಿ ನಾವು ಹಲವಾರು ರಾಷ್ಟ್ರಗಳಿಗೆ ಲಸಿಕೆಗಳನ್ನು ಕಳುಹಿಸಿದ್ದೇವೆ. ಭಾರತದ ಲಸಿಕೆ ಪ್ರಯತ್ನಗಳು ಕೊರೊನಾ ವಿರುದ್ಧದ ಜಾಗತಿಕ ಹೋರಾಟವನ್ನು ಬಲಗೊಳಿಸಿವೆ ಎಂದು ನನಗೆ ಖುಷಿಯಾಗಿದೆ ಎಂದು ಮೋದಿ ಹೇಳಿದ್ದಾರೆ.