ಇಂದಿನಿಂದ ಕೇದರನಾಥ ದೇಗುಲ ಓಪನ್ ; ಭಕ್ತರಿಗೆ ಪ್ರವೇಶ ನಿರ್ಬಂಧ…

105
firstsuddi

ಡೆಹ್ರಾಡೂನ್ : ಕೊರೊನಾ ಭೀತಿ ಹಿನ್ನಲೆ ಮುಚ್ಚಿದ್ದ ಕೇದಾರನಾಥ ದೇವಾಲಯವನ್ನು ಇಂದು ಮುಂಜಾನೆ 5 ಗಂಟೆಗೆ ತೆರೆಯಲಾಗಿದೆ. ಆದರೆ ದರ್ಶನಕ್ಕೆ ಭಕ್ತರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ವೈದಿಕ ಸ್ತೋತ್ರಗಳು ಮತ್ತು ಧಾರ್ಮಿಕ ಪೂಜೆ- ಪುನಸ್ಕಾರದ ಮೂಲಕ ದೇಗುಲದ ಬಾಗಿಲು ತೆರೆಯಲಾಗಿದೆ. ಕೋವಿಡ್ ಸೋಂಕು ಹೆಚ್ಚಾಗಿರುವ ಹಿನ್ನೆಲೆ ಚಾರ್ಧಾಮ್ ದೇವಸ್ಥಾನ ಮಂಡಳಿಯು ಚಾರ್ಧಾಮ್ ಯಾತ್ರೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಆದರೆ ಆಡಳಿತ ಮಂಡಳಿಯು ಭಕ್ತರಿಗೆ ಆನ್ ಲೈನ್ ಮೂಲಕ ದೇವಾಲಯಗಳ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.

ಇನ್ನು ದೇವಾಲಯ ಇಂದು ತೆರೆದಿದ್ದ ಹಿನ್ನೆಲೆಯಲ್ಲಿ ಉತ್ತರಾಖಂಡ್ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಅವರು, ಎಲ್ಲರೂ ಆರೋಗ್ಯವಾಗಿರಲು ನಾನು ಬಾಬಾ ಕೇದಾರನಾಥನನ್ನು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.