ಇಂದು ರಾತ್ರಿಯಿಂದಲೇ ವೀಕೆಂಡ್ ಕರ್ಫ್ಯೂ ಜಾರಿ.. ಏನಿರುತ್ತೆ? ಏನಿರಲ್ಲ?

96
firstsuddi

ಬೆಂಗಳೂರು : ಕೊರೊನಾ ಮೂರನೇ ಅಲೆ ಹಾಗೂ ಓಮಿಕ್ರಾನ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮ ಜಾರಿಗೆ ತಂದಿದೆ. ಅದರಂತೆ ರಾಜ್ಯದಲ್ಲಿ ಮತ್ತೆ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದೆ. ಇಂದು ರಾತ್ರಿ 10 ರಿಂದ ಸೋಮವಾರ ಮುಂಜಾನೆ 5 ಗಂಟೆವರೆಗೆ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈ ವೇಳೆ ತುರ್ತು ಸೇವೆ ಹೊರತುಪಡಿಸಿ ಉಳಿದಂತೆ ಎಲ್ಲಾ ಸೇವೆಗಳು ಬಂದ್ ಆಗಲಿವೆ.

ವೀಕೆಂಡ್ ಕರ್ಫ್ಯೂ ವೇಳೆ ಏನಿರುತ್ತೆ?
• ಹಾಲಿನ ಬೂತ್ ಗಳು, ತರಕಾರಿ ಮತ್ತು ಹಣ್ಣಿನ ಅಂಗಡಿಗಳು ತೆರೆದಿರುತ್ತವೆ.

• ದಿನಸಿ ಅಂಗಡಿಗಳು, ಮಾಂಸದ ಅಂಗಡಿಗಳು, ಮೀನು ಮಾರುಕಟ್ಟೆಗಳು ಎಂದಿನಂತೆ ತೆರೆದಿರುತ್ತದೆ.

• ಆಸ್ಪತ್ರೆಗಳು, ನರ್ಸಿಂಗ್ ಹೋಂ, ಮೆಡಿಕಲ್ ಶಾಪ್, ನ್ಯಾಯಬೆಲೆ ಅಂಗಡಿಗಳು ಕಾರ್ಯಚಟುವಟಿಕೆ ನಡೆಸಲಿವೆ.

• ಬೀದಿ ಬದಿ ವ್ಯಾಪಾರಿಗಳ ಕಾರ್ಯಚಟುವಟಿಕೆ ಎಂದಿನಂತಿರಲಿದೆ.

• ಪೆಟ್ರೋಲ್ ಬಂಕ್ ಗಳು, ಕೃಷಿ ಮಾರುಕಟ್ಟೆಗಳು ತೆರೆಯಲಿವೆ.

• ಎಲ್ಲ ಪದಾರ್ಥಗಳನ್ನು ಹೋಂ ಡೆಲಿವರಿ ಮಾಡಲು ಅನುಮತಿ

• ಹೋಟೆಲ್ ನಲ್ಲಿ ಕೇವಲ ಪಾರ್ಸೆಲ್ ಗೆ ಮಾತ್ರ ಅವಕಾಶ.

• ಐಟಿ ಬಿಟಿ ಕಂಪನಿಗಳು, ಕೈಗಾರಿಕೆಗಳ ಕಾರ್ಯಚಟುವಟಿಕೆ ಯಥಾಸ್ಥಿತಿಯಲ್ಲಿರಲಿದೆ.

ಏನಿರಲ್ಲ?
• ಚಿತ್ರಮಂದಿರಗಳು, ಮಾಲ್‌ಗಳು ತೆರೆಯುವಂತಿಲ್ಲ.

• ಈಜು ಕೊಳಗಳು, ಜಿಮ್ ತೆರೆಯುವಂತಿಲ್ಲ.

• ಪಬ್, ಕ್ಲಬ್, ಬಾರ್ ಅಂಡ್ ರೆಸ್ಟೋರೆಂಟ್, ಬಾರ್‌ಗಳು ಓಪನ್ ಇರಲ್ಲ

• ವಾಹನ ಸರ್ವೀಸ್ ಸೆಂಟರ್‌ಗಳು ಕಾರ್ಯನಿರ್ವಹಿಸಲ್ಲ.

• ಸಾರ್ವಜನಿಕ ಗ್ರಂಥಾಲಯಗಳು, ಬ್ಯೂಟಿ ಪಾರ್ಲರ್‌ಗಳು, ಸಲೂನ್ ತೆರೆಯುವುದಿಲ್ಲ.