ಇನ್ಮುಂದೆ ವಿಮಾನ ಪ್ರಯಾಣದ ವೇಳೆ ಮಾಸ್ಕ್ ಕಡ್ಡಾಯವಲ್ಲ…

64
firstsuddi

ನವದೆಹಲಿ : ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಇದನ್ನು ಗಮನದಲ್ಲಿಟ್ಟು ವಿಮಾನ ಪ್ರಯಾಣದ ವೇಳೆ ಇನ್ನು ಮುಂದೆ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ಕೊರೊನಾ ಕಡಿಮೆಯಾದ ಬಳಿಕವೂ ಅನೇಕ ಕಡೆಗಳಲ್ಲಿ ಮಾಸ್ಕ್ ಕಡ್ಡಾಯವಾಗಿತ್ತು. ಅಲ್ಲದೇ ಮಾಸ್ಕ್ ಧರಿಸದವರಿಗೆ ದಂಡ ಹಾಕಲಾಗುತ್ತಿತ್ತು. ಈವರೆಗೂ ವಿಮಾನಗಳಲ್ಲಿ ಪ್ರಯಾಣಿಸಲು ಮಾಸ್ಕ್ ಹಾಗೂ ಫೇಸ್ ಕವರ್ ಗಳು ಕಡ್ಡಾಯವಾಗಿತ್ತು. ಆದರೆ ಇದೀಗ ವಿಮಾನ ಪ್ರಯಾಣದ ವೇಳೆ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ ಎಂದು ಹೇಳಿದೆ.

ಆರೋಗ್ಯ ಸಚಿವಾಲಯದೊಂದಿಗೆ ಪರಿಶೀಲನಾ ಸಭೆ ನಡೆಸಿದ ಬಳಿಕ ನಾಗರಿಕ ವಿಮಾನಯಾನ ಸಚಿವಾಲಯ ಈ ನಿರ್ಧಾರವನ್ನು ಪ್ರಕಟಿಸಿದೆ. ನಿಮಗೆ ಇಷ್ಟವಿದ್ದರೆ ಮಾಸ್ಕ್ ಧರಿಸಬಹುದು. ಇಲ್ಲವೇ ಹಾಗೆಯೇ ಪ್ರಯಾಣ ಮಾಡಬಹುದು. ವಿಮಾನದೊಳಗೆ ಮಾಸ್ಕ್ ಹಾಕದಿದ್ರೆ ದಂಡ ವಿಧಿಸುವ ಅಗತ್ಯವಿಲ್ಲ ಎಂದು ಸಚಿವಾಲಯ ತಿಳಿಸಿದೆ.