ಈ ದೇಶದಲ್ಲಿ ಗಾಂಜಾ ಬೆಳೆಯುವುದು ಕಾನೂನು ಬಾಹಿರವಲ್ಲ…

73
firstsuddi

ಬ್ಯಾಂಕಾಕ್ : ಮೊದಲ ಬಾರಿಗೆ ದಕ್ಷಿಣ ಏಷ್ಯಾದ ದೇಶ ಥೈಲ್ಯಾಂಡ್ ನಲ್ಲಿ ಗಾಂಜಾ ಬೆಳೆಯುವುದಕ್ಕೆ ಅನುಮತಿ ನೀಡಲಾಗಿದೆ. ಗಾಂಜಾ ಬೆಳೆಯುವುದು ಅಪರಾಧವಲ್ಲ ಎಂದು ಘೋಷಿಸಿದೆ.

ಗಾಂಜಾ ಬೆಳೆಯುವುದು ಕಾನೂನು ಬಾಹಿರವಲ್ಲ. ಆರ್ಥಿಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಆದರೆ ವೈದ್ಯಕೀಯ ಬಳಕೆಗೆ ಮಾತ್ರವೇ ಅದಕ್ಕೆ ಅನುಮತಿ ನೀಡಲಾಗಿದ್ದು, ಮಾದಕದ್ರವ್ಯ ಬಳಕೆಗೆ ಕಾನೂನು ಬಾಹಿರವಿದೆ ಎಂದು ಥೈಲ್ಯಾಂಡ್ ಆರೋಗ್ಯ ಸಚಿವ ಅನುಟಿನ್ ಚಾರ್ನ್ವಿರಾಕುಲ್ ಹೇಳಿದ್ದಾರೆ.

ರೆಸ್ಟೋರೆಂಟ್ ಗಳಲ್ಲಿ ಆಹಾರ ಹಾಗೂ ಪಾನೀಯಗಳಲ್ಲಿ ಗಾಂಜಾದ ಬಳಕೆ ಮಾಡಬಹುದು. ಲೈಸೆನ್ಸ್ ಇಲ್ಲದೆ ಗಾಂಜಾದ ವಾಣಿಜ್ಯ ಬಳಕೆಗೆ ಥೈಲ್ಯಾಂಡ್ ನಲ್ಲಿ ಅನುಮತಿಯಿಲ್ಲ ಎಂದು ತಿಳಿಸಿದ್ದಾರೆ.