ಈಶ್ವರಪ್ಪನವರು ಬಿಡಿ ಅವರು ಈಶ್ವರ ಎಂದು ನಸುನಕ್ಕ ಸಚಿವ ಸೋಮಣ್ಣ.

122
firstsuddi

ಚಿಕ್ಕಮಗಳೂರು : ನಗರದಲ್ಲಿ ಮಾಧ್ಯಮಗಳಿಗೆ ನೈಟ್ ಕರ್ಫ್ಯೂ ಬಗ್ಗೆ ಸಚಿವ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ವಿ. ಸೋಮಣ್ಣ ಅವರು, ಈಶ್ವರಪ್ಪನವರು ಬಿಡಿ ಅವರು ಈಶ್ವರ. ಒಂದೊಂದು ಬಾರಿ ಒಂದೊಂದು ರೀತಿ ಇರುತ್ತಾರೆ ಎಂದು ನಸುನಕ್ಕರು.

ವೀಕೆಂಡ್ ಕರ್ಫ್ಯೂ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆಯೇ ಆಗಿಲ್ಲ. ನಾನೂ ಬೆಂಗಳೂರಿನವನೇ ಪರಿಸ್ಥಿತಿ ಅವಲೋಕಿಸಬೇಕು. ಕೇಂದ್ರ ಹಾಗೂ ತಾಂತ್ರಿಕ ತಜ್ಞರ ಸೂಚನೆಯಂತೆ ಮುಖ್ಯಮಂತ್ರಿ ಕ್ರಮಕೈಗೊಂಡಿದ್ದಾರೆ. ನಮಗೆ ಎಲ್ಲಕ್ಕಿಂತ ದೊಡ್ಡದು ಆರೋಗ್ಯ, ಜೀವದ ಜೊತೆ ಸರಸ ಹಾಗೂ ಉದಾಸೀನ ಮಾಡೋದು ಬೇಡ. ಸರ್ಕಾರ ಕಠಿಣ ನಿಲುವು ತೆಗೆದುಕೊಂಡಿದೆ. ಜನ ಸರ್ಕಾರದ ಜೊತೆ ಸಹಕರಿಸಬೇಕು ಎಂದು ಮನವಿ ಮಾಡಿದರು.