ಉಕ್ರೇನ್ ನ ಚೆರ್ನೋಬಿಲ್ ಪರಮಾಣು ಸ್ಥಾವರ ವಶಪಡಿಸಿಕೊಂಡ ರಷ್ಯಾ.

64
firstsuddi

ಕೀವ್ : ರಷ್ಯಾದ ಪಡೆಗಳು ಭೀಕರ ದಾಳಿ ನಡೆಸಿ ಪ್ರಮುಖ ನಗರವಾದ ಚೆರ್ನೋಬಿಲ್ ನಲ್ಲಿರುವ ಪರಮಾಣು ವಿದ್ಯುತ್ ಸ್ಥಾವರವನ್ನು ವಶಕ್ಕೆ ಪಡೆದುಕೊಂಡಿವೆ ಎಂದು ಉಕ್ರೇನ್ ತಿಳಿಸಿದೆ.

ಈ ಬಗ್ಗೆ ಉಕ್ರೇನ್ ಅಧ್ಯಕ್ಷೀಯ ಕಚೇರಿಯ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ಮಾಹಿತಿ ನೀಡಿದ್ದು, ರಷ್ಯನ್ನರ ಸಂಪೂರ್ಣ ಅರ್ಥಹೀನ ದಾಳಿಯ ನಂತರ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವು ಸುರಕ್ಷಿತವಾಗಿದೆ ಎಂದು ಹೇಳುವುದು ಅಸಾಧ್ಯ ಎಂದು ಹೇಳಿದ್ದಾರೆ.

ಪರಮಾಣು ಅಸ್ತ್ರಗಳನ್ನು ಉಕ್ರೇನ್ ನ ಚೆರ್ನೋಬಿಲ್ ನಲ್ಲಿ ಶೇಖರಿಸಿಟ್ಟಿರಬಹುದೆಂಬ ಮಾಹಿತಿ ಹಿನ್ನೆಲೆಯಲ್ಲಿ ರಷ್ಯಾ ದಾಳಿ ನಡೆಸಿದೆ ಎನ್ನಲಾಗಿದೆ.