ಉಕ್ರೇನ್‍ನಲ್ಲಿ ಭಾರತದ ವಿದ್ಯಾರ್ಥಿಗೆ ತಗುಲಿದ ಗುಂಡು – ಆಸ್ಪತ್ರೆಗೆ ದಾಖಲು…

89
firstsuddi

ಕೀವ್ : ಉಕ್ರೇನ್ ನ ರಾಜಧಾನಿ ಕೀವ್ ನಲ್ಲಿ ಮತ್ತೋರ್ವ ಭಾರತೀಯ ವಿದ್ಯಾರ್ಥಿಗೆ ಗುಂಡು ತಗುಲಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ ಎನ್ನುವ ಮಾಹಿತಿ ಸಿಕ್ಕಿದೆ.

ಕೀವ್ ನಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನಿಗೆ ಗುಂಡು ಹಾರಿಸಲಾಗಿದೆ ಎಂದು ವರದಿಯಾಗಿದೆ. ಹಾಗೂ ಗಾಯಗೊಂಡಿರುವ ಆ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೇಂದ್ರ ಸಚಿವ ವಿಕೆ ಸಿಂಗ್ ಮಾಹಿತಿ ನೀಡಿದ್ದಾರೆ. ಗಾಯಾಗೊಂಡಿರುವ ವಿದ್ಯಾರ್ಥಿ ಯಾರು? ಎನ್ನುವ ಮಾಹಿತಿ ತಿಳಿದುಬಂದಿಲ್ಲ.

ಭಾರತೀಯ ರಾಯಭಾರ ಕಚೇರಿಯು ಈ ಹಿಂದೆ ಎಲ್ಲರೂ ಕೀವ್ ತೊರೆಯಬೇಕು ಎಂದು ಮನವಿ ಮಾಡಿತ್ತು. ಈ ಬಗ್ಗೆ ಎಲ್ಲ ವಿದ್ಯಾರ್ಥಿಗಳಿಗೆ ಸಂದೇಶ ಕೂಡಾ ರವಾನೆ ಮಾಡಿತ್ತು.