ಉಗ್ರರ ಗುಂಡಿನ ದಾಳಿಗೆ ಮೂವರು ಬಿಜೆಪಿ ಮುಖಂಡರು ಬಲಿ…

182
firstsuddi

ಶ್ರೀನಗರ : ಮೂವರು ಬಿಜೆಪಿ ಮುಖಂಡರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಜಮ್ಮು ಕಾಶ್ಮೀರಾದ ಖುಲ್ಗಾಮ್ ಜಿಲ್ಲೆಯ ಖಾಂಜಿಗುಂಡ್‍ನ ವೈ ಕೆ ಪೊರಾ ಪ್ರದೇಶದಲ್ಲಿ ನಡೆದಿದೆ. ಮೃತ ಮುಖಂಡರನ್ನು ಕುಲ್ಗಾಂ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಫಿದಾ ಹುಸೇನ್, ಉಮರ್ ರಂಜಾನ್ ಹಾಗೂ ಉಮರ್ ರಶೀದ್ ಎಂದು ಗುರುತಿಸಲಾಗಿದೆ. ಉಗ್ರರು ನಿನ್ನೆ ಸಂಜೆ ವೈ ಕೆ ಪೊರಾ ಪ್ರದೇಶದಲ್ಲಿ ಮುಖಂಡರ ಮೇಲೆ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಒಬ್ಬ ಮುಖಂಡ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬನ್ನು ಖಾಜಿಗುಂಡ್‍ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರಿಬ್ಬರು ಮೃತಪಟ್ಟಿದ್ದು, ಘಟನಾ ಸ್ಥಳದಲ್ಲಿ ಭದ್ರತಾ ಪಡೆಗಳು ಉಗ್ರರಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.