ಉಡುಪಿ : ಊಟ ಮುಗಿಸಿ ವಾಪಾಸಾಗುತ್ತಿದ್ದ ಯುವಕ ಕುಸಿದು ಬಿದ್ದು ಸಾವು…

178
firstsuddi

ಉಡುಪಿ : ಊಟ ಮುಗಿಸಿ ವಾಪಾಸಾಗುತ್ತಿದ್ದ ಯುವಕ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಪಂದುಬೆಟ್ಟುವಿನಲ್ಲಿ ನಡೆದಿದೆ. ಮೃತ ಯುವಕನನ್ನು ಉದ್ಯಾವರ ಸಂಪಿಗೆ ನಗರ ನಿವಾಸಿ ಸಚಿನ್ (23) ಎಂದು ಗುರುತಿಸಲಾಗಿದೆ. ಮೃತ ಯುವಕ ನಿನ್ನೆ ಮಧ್ಯಾಹ್ನ ತನ್ನ ಗೆಳೆಯರೊಂದಿಗೆ ಆದಿ ಉಡುಪಿ ಪಂದುಬೆಟ್ಟಿನಲ್ಲಿರುವ ವಿಲೇಜ್ ಇನ್ ಬಾರ್ ನಲ್ಲಿ ಊಟ ಮುಗಿಸಿ ಹೊರಗೆ ಬರುವಾಗ ಯುವಕ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ಕೂಡಲೇ ಚಿಕಿತ್ಸೆಗಾಗಿ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಅಜ್ಜರಕಾಡು ಸರ್ಕಾರಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು ಯುವಕ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.