ಉಡುಪಿ : ಠಾಣೆಯ ಸಮೀಪವೇ KSRP ಸಿಬ್ಬಂದಿ ಆತ್ಮಹತ್ಯೆಗೆ ಶರಣು…

202
firstsuddi

ಉಡುಪಿ : ಕರ್ತವ್ಯ ನಿರತರಾಗಿದ್ದ KSRP ಸಿಬ್ಬಂಧಿಯೋರ್ವರು ಠಾಣೆಯ ಸಮೀಪವೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಅಮಾಸೆಬೈಲ್‍ನಲ್ಲಿ ನಡೆದಿದೆ. ಕಲಬುರಗಿಯ ನೌರುಗಂಜ್ ಮೂಲದ ನಿವಾಸಿ ಮಲ್ಲಿಕಾರ್ಜುನ ಗುಬ್ಬಿ(56) ಆತ್ಮಹತ್ಯೆಗೆ ಶರಣಾದ ಸಿಬ್ಬಂದಿ ಎಂದು ಗುರುತಿಸಲಾಗಿದ್ದು, ಇವರು ಮೇ. 16ರಂದು ನಕ್ಸಲ್ ಪೀಡಿತ ಪ್ರದೇಶವಾಗಿರುವ ಅಮಾಸೆಬೈಲು ಪೊಲೀಸ್ ಠಾಣೆಗೆ ಭದ್ರತೆಗಾಗಿ ನಿಯೋಜನೆಗೊಂಡಿದ್ದರು. 3 ತಿಂಗಳ ಹಿಂದೆ ಕೊಪ್ಪಳದ ಮುನಿರಾಬಾದ್‍ಗೆ ವರ್ಗಾವಣೆಗೊಂಡಿದ್ದ ಇವರು ಮೇ. 30ರಂದು ಮುನಿರಾಬಾದ್‍ಗೆ ತೆರಳಬೇಕಿತ್ತು. ಆದರೆ ಮಲ್ಲಿಕಾರ್ಜುನ ಅವರು ಠಾಣೆಯ ಬಳಿಯೇ ಇರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಲ್ಲಿಕಾರ್ಜುನ ಅವರು ಅನಾರೋಗ್ಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.