ಉಡುಪಿ : ಸಿಡಿಲು ಬಡಿದು ಯುವಕ ಸಾವು…

183
firstsuddi

ಉಡುಪಿ: ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟಿರುವ ಧಾರುಣ ಘಟನೆ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ಏಣಗುಡ್ಡೆಯಲ್ಲಿ ನಡೆದಿದೆ. ಮೃತ ಯುವಕನನ್ನು ಕಟಪಾಡಿ ಜೆ.ಎನ್. ನಗರ ಪಡು ಏಣಗುಡ್ಡೆ ನಿವಾಸಿ ಸುರೇಶ್ ಅವರ ಪುತ್ರ ಭರತ್ (22)ಎಂದು ಗುರುತಿಸಲಾಗಿದೆ. ನಿನ್ನೆ ರಾಜ್ಯದ ಹಲವೆಡೆ ಭಾರಿ ಗಾಳಿ ಗುಡುಗು-ಮಿಂಚು ಸಹಿತ ಭಾರಿ ಮಳೆಯಾಗಿದ್ದು, ಈ ವೇಳೆ ಯುವಕ ತನ್ನ ಮನೆಯಲ್ಲಿ ಕುಳಿತಿದ್ದ ವೇಳೆ ಸಿಡಿಲು ಬಡಿದು ನೆಲಕ್ಕೆ ಕುಸಿದು ಬಿದ್ದಿದ್ದು, ಇದರಿಂದ ಆಘಾತಗೊಂಡ ಮನೆಯವರು ಭರತನನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದು, ವಿಷಯ ತಿಳಿಯುತ್ತಿದ್ದಂತೆ ಕಾಪು ಠಾಣೆಯ ಠಾಣಾಧಿಕಾರಿ ರಾಜ್ ಶೇಖರ್ ಸಾಗನೂರ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.