ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವೈಯಕ್ತಿಕ ಖಾತೆಯಿಂದ ಬ್ಲ್ಯೂ ಟಿಕ್ ತೆಗೆದುಹಾಕಿ ಮತ್ತೆ ನೀಡಿದ ಟ್ವಿಟರ್…

101
firstsuddi

ನವದೆಹಲಿ : ಸಾಮಾನ್ಯವಾಗಿ ಗಣ್ಯರು, ರಾಜಕಾರಣಿಗಳು, ಸೆಲೆಬ್ರಿಟಿಗಳ ಸೋಷಿಯಲ್ ಮೀಡಿಯಾ ಖಾತೆಗೆ ಬ್ಲ್ಯೂ ಟಿಕ್ ಇರುತ್ತದೆ. ಅವರ ಹೆಸರಿನಲ್ಲಿ ಹಲವಾರು ಖಾತೆಗಳು ಇರುವ ಕಾರಣ ಅಧಿಕೃತ ಖಾತೆಯ ಬಗ್ಗೆ ಗೊಂದಲ ಆಗಬಾರದೆಂದು ನೀಲಿ ಬ್ಯಾಡ್ಜ್ ನೀಡಲಾಗುತ್ತದೆ. ಸದ್ಯ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಯಿಂದ ಬ್ಲ್ಯೂ ಟಿಕ್ ತೆಗೆದುಹಾಕಿತ್ತು, ಆದರೆ ಇದೀಗ ಮತ್ತೆ ನೀಡಿದೆ.

ಇಂದು ಬೆಳಗ್ಗೆ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆ ಯಿಂದ ಬ್ಲ್ಯೂ ಟಿಕ್ ತೆಗೆದುಹಾಕಿದ್ದ ಟ್ವಿಟರ್, ಅವರ ಕಛೇರಿಯ ಟ್ವೀಟರ್ ಖಾತೆ ಅಧಿಕೃತ ಖಾತೆ ಯಲ್ಲಿ ಬ್ಲ್ಯೂ ಟಿಕ್ ಹಾಗೆಯೇ ಉಳಿಸಿತ್ತು.  ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಅಧಿಕೃತ ಟ್ವಿಟ್ಟರ್ ಖಾತೆಯ ಬ್ಲೂ ಟಿಕ್ ಮಾಯವಾಗಿದೆ ಎನ್ನುವ ಸುದ್ದಿ ಹೊರ ಬೀಳುತ್ತಿದ್ದಂತೆ ಪುನಃ ಬ್ಲೂ ಟಿಕ್ ಮಾರ್ಕ್ ಹಾಕಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಟ್ವೀಟರ್, ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆ ಕಳೆದ ಆರು ತಿಂಗಳಿಂದಲೂ ನಿಷ್ಕ್ರಿಯವಾಗಿತ್ತು. ಅಲ್ಲಿಂದ ಯಾವುದೇ ಟ್ವೀಟ್ ಗಳನ್ನು ಮಾಡಲಾಗಿಲ್ಲ. ಹೀಗಾಗಿ ಬ್ಲ್ಯೂ ಟಿಕ್ ತೆಗೆದು ಹಾಕಲಾಗಿದ್ದು, ಮತ್ತೆ ಅವರ ವೈಯಕ್ತಿಕ ಖಾತೆಗೆ ಬ್ಲ್ಯೂ ಟಿಕ್ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ.