ಕುಮಾರಸ್ವಾಮಿ-ಸುಮಲತಾ ಪರಸ್ಪರ ಕಚ್ಚಾಡುವುದನ್ನು ಬಿಡಬೇಕು. : ಬಿಎಸ್ ವೈ.

105
firstsuddi

ಕಲಬುರಗಿ : ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಮಧ್ಯೆ ನಡೆಯುತ್ತಿರುವ ಸಮರದ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಬಿ.ಎಸ್.ಯಡಿಯೂರಪ್ಪನವರು ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ನಮ್ಮ ಸರ್ಕಾರ ಒಪ್ಪಿಗೆ ನೀಡಿರುವ ಬಗ್ಗೆ ನನಗೆ ಸಮಾಧಾನ ತಂದಿದೆ. ಕುಮಾರಸ್ವಾಮಿ ಮತ್ತು ಸುಮಲತಾ ಅವರು ಪರಸ್ಪರ ಕಚ್ಚಾಡುವುದನ್ನು ಬಿಡಬೇಕು. ಮಂಡ್ಯ ರಾಜ್ಯದ ಒಂದು ಭಾಗ. ಎಲ್ಲರೂ ಸಹೋದರರಂತೆ ಬಾಳುವುದನ್ನು ಕಲಿಯಬೇಕು. ಅಲ್ಲಿನ ಅಭಿವೃದ್ಧಿಗೆ ಒಟ್ಟಾಗಿ ದುಡಿಯಬೇಕು ಎಂದು ಸಲಹೆ ನೀಡಿದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಅಥವಾ ಸಚಿವರನ್ನು ಕೈ ಬಿಡುವ ಬಗ್ಗೆ ಯಾವುದೇ ಚಿಂತನೆ ನಡೆದಿಲ್ಲ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.