ಏಪ್ರಿಲ್ ಅಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಇಂಗ್ಲೆಂಡ್ ಪ್ರಧಾನಿ..!

158
Firstsuddi

ಲಂಡನ್ : ಯುನೈಟೆಡ್ ಕಿಂಗಂಡಮ್ ನ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಏಪ್ರಿಲ್ ತಿಂಗಳಾಂತ್ಯಕ್ಕೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬಂದ ನಂತರ ಇದೇ ಮೊದಲ ಬಾರಿಗೆ ಬೋರಿಸ್ ಜಾನ್ಸನ್ ಅವರು ಪ್ರಮುಖ ರಾಷ್ಟ್ರವೊಂದಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಬಗ್ಗೆ ಇಂಗ್ಲೆಂಡ್ ಪ್ರಧಾನಿ ಕಚೇರಿ ಮೂಲಗಳು ತಿಳಿಸಿವೆ.

ಬೋರಿಸ್ ಜಾನ್ಸನ್ ಅವರು ಈ ವರ್ಷ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬರಬೇಕಿತ್ತು. ಆದರೆ ಇಂಗ್ಲೆಂಡಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದರಿಂದ ಕೊನೆ ಕ್ಷಣದಲ್ಲಿ ಪ್ರವಾಸವನ್ನು ರದ್ದುಪಡಿಸಲಾಯಿತು.

ಉಭಯ ದೇಶಗಳ ಮಧ್ಯೆ ದ್ವಿಪಕ್ಷೀಯ ಬಾಂಧವ್ಯ, ಅವಕಾಶಗಳ ವೃದ್ಧಿಗೆ, ಸಹಕಾರ ವರ್ಧನೆಗೆ ಇಂಗ್ಲೆಂಡ್ ಪ್ರಧಾನಿಯ ಈ ಭೇಟಿ ಸಹಾಯವಾಗಲಿದೆ ಎಂದು ಹೇಳಲಾಗಿದ್ದು, ಚೀನಾಕ್ಕೆ ಪ್ರಜಾಪ್ರಭುತ್ವದ ಪ್ರತಿರೋಧವನ್ನು ಸೃಷ್ಟಿಸಲು ಕೂಡ ಇಂಗ್ಲೆಂಡ್ ಪ್ರಧಾನಿ ಭೇಟಿ ಭಾರಿ ಮಹತ್ವವನ್ನೂ ಪಡೆದುಕೊಂಡಿದೆ.