ಏರ್ ಗನ್ ಜೊತೆ ಆಡುವಾಗ ಮಿಸ್ ಫೈರ್, 7 ವರ್ಷದ ಬಾಲಕನ ಎದೆಗೆ ಹೊಕ್ಕಿದ ಗುಂಡು…

33
firstsuddi

ಚಿಕ್ಕಮಗಳೂರು: ಏರ್ ಗನ್ ಜೊತೆ ಆಟವಾಡುವಾಗ ಮಿಸ್ ಫೈರ್ ಆಗಿ ಏಳು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ತಾಲೂಕಿನ ಮಲ್ಲೇನಹಳ್ಳಿಯ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ನಡೆದಿದೆ.

ವಿಷ್ಣುರಾಜ್(7) ಮೃತ ಬಾಲಕ. ಕಾಫಿ ತೋಟದಲ್ಲಿ ಮಂಗಗಳನ್ನ ಓಡಿಸಲು ಬಳಸುವ ಏರ್ ಗನ್ ಜೊತೆ ವಿಷ್ಣು ಮನೆ ಮುಂದೆ ಆಟವಾಡುತ್ತಿದ್ದ. ಈ ವೇಳೆ ವಿಷ್ಣು ಅಚಾನಕ್ ಆಗಿ ಟ್ರಿಗರ್ ಒತ್ತಿದ್ದಾನೆ. ಪರಿಣಾಮ ಏರ್ ಗನ್ ಫೈರ್ ಆಗಿದ್ದು, ನೇರವಾಗಿ ಗನ್ನೊಳಗಿದ್ದ ಗುಂಡು ವಿಷ್ಣುವಿನ ಎದೆಯ ಭಾಗಕ್ಕೆ ಹೊಕ್ಕಿದೆ. ಪೋಷಕರು ಮನೆಯಲ್ಲಿ ಇದ್ದಾಗಲೇ ಈ ದುರ್ಘಟನೆ ಸಂಭವಿಸಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಸದ್ಯ ಬಾಲಕನ ಮೃತದೇಹ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.