ಏಷ್ಯಾದಲ್ಲೇ ಎತ್ತರದ ಏಸು ಪ್ರತಿಮೆ ನಿರ್ಮಾಣದ ಸ್ಥಳಮಹಿಮೆ ಹಿನ್ನೆಲೆ ಏನು?-ಮಾಜಿ ಸಚಿವ ಡಿಕೆಶಿ ಗೆ ಬಿ.ವೈ ವಿಜಯೇಂದ್ರ ಪ್ರಶ್ನೆ

323
firstsuddi

ಬೆಂಗಳೂರು : ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಏಸುವಿನ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ ದಿನದಿಂದಲೂ ಬಿಜೆಪಿ ನಾಯಕರ ಖಂಡನೆ ನಿರಂತರವಾಗಿ ಮುಂದುವರೆದಿದ್ದು, ಈಗಾ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ, ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಅವರು ತಮ್ಮ ಟ್ವಿಟರ್ ಮೂಲಕ ಖಂಡನೆ ವ್ಯಕ್ತಪಡಿಸಿದ್ದಾರೆ. “ ಶ್ರೀ ಡಿ.ಕೆ. ಶಿವಕುಮಾರ್ ರವರೇ ಹೈಕಮಾಂಡ್ ಓಲೈಕೆ ಅಸ್ತ್ರವಾಗಿ ಏಸುವನ್ನು ಬಳಸಿಕೊಳ್ಳುತ್ತಿರುವ ನಿಮ್ಮ ನಡೆ, ನಾಡಿನ ಸಂಸ್ಕೃತಿ, ಇತಿಹಾಸಕ್ಕೆ ಬಗೆಯುತ್ತಿರುವ ಐತಿಹಾಸಿಕ ಅಪಚಾರವಾಗಿದೆ. ಸ್ಥಳಮಹಿಮೆಯ ಹಿನ್ನೆಲೆಯಲ್ಲಿ ಪ್ರತಿಮೆ, ಸ್ಮಾರಕಗಳ ನಿರ್ಮಾಣವಾಗುತ್ತದೆ. ಏಷ್ಯಾದಲ್ಲೇ ಎತ್ತರದ ಏಸು ಪ್ರತಿಮೆ ನಿರ್ಮಾಣದ ಸ್ಥಳಮಹಿಮೆ ಹಿನ್ನೆಲೆ ಏನು? ಎಂದು ಪ್ರಶ್ನಿಸಿದ್ದು, ಬಳಿಕ ಮತ್ತೊಂದು ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ. “ ಶ್ರೀ ಡಿ.ಕೆ. ಶಿವಕುಮಾರ್ ರವರೇ, ಕೆಪಿಸಿಸಿ ಅಧ್ಯಕ್ಷ ಪಟ್ಟದಲ್ಲಿ ಕುಳಿತುಕೊಳ್ಳಲು ಈ ಪರಿಯಲ್ಲಿ ನಿಮ್ಮ ಹೈಕಮಾಂಡ್ ಓಲೈಸಬೇಕಾ? ಕೆಂಪೇಗೌಡರ ನೆಲದ ಹೆಗ್ಗಳಿಕೆಯ ಇತಿಹಾಸದ ಮೇಲೆ ಅಟ್ಟಹಾದ ಮೆರೆದು ಕನ್ನಡನಾಡಿನ ವೈಭವದ ಸಂಸ್ಕøತಿಗೆ ಧಕ್ಕೆ ತರುವ ಐತಿಹಾಸಿಕ ಪ್ರಮಾದ ಮಾಡುತ್ತಿದ್ದೀರಿ. ಇದಕ್ಕೆ ರಾಹುಲ್, ಸೋನಿಯಾ ಬೆನ್ನು ತಟ್ಟಬಹುದು, ಜನತೆ ಕ್ಷಮಿಸುವರೇ? ಎಂದು ಟ್ವೀಟ್ ಮಾಡಿದ್ದಾರೆ.