ಚೀನಾ : ಕಿರಿಯರ ವಿಭಾಗದ ಶೂಟಿಂಗ್ ಪಂದ್ಯಾವಳಿಯ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಅಂತಿಮ ಪಂದ್ಯದಲ್ಲಿ ಭಾರತದ 17 ವರ್ಷದ ಮನು ಭಾಕರ್ ಅವರು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. 2019ರ ಐಎಸ್‍ಎಸ್‍ಎಫ್ ವಿಶ್ವಕಪ್‍ನ ಅಂತಿಮ ಪಂದ್ಯದಲ್ಲಿ ಮನು ಭಾಕರ್ ಅವರು 244.7 ಅಂಕವನ್ನು ಪಡೆಯುವ ಮೂಲಕ ಜೂನಿಯರ್ ವಿಭಾಗದ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಭಾರತದ ಮತ್ತೊಬ್ಬ ಆಟಗಾರ್ತಿ ಯಶಸ್ವಿನಿ ಸಿಂಗ್ ಅವರು 6ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದು, ಸರ್ಬಿಯಾದ ಝೊರಾನಾ ಅರುಣೊವಿಕ್ 241.9 ಅಂಕ ಗಳಿಸಿ ಬೆಳ್ಳಿ ಪದಕ, ಹಾಗೂ ಚೀನಾದ ಕ್ವಿಯಾನ್ ವಾಂಗ್ 221.8 ಅಂಕ ಗಳಿಸಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದು, ಪುರುಷರ 10 ಮೀಟರ್ ಏರ್ ಪಿಸ್ತೂಲ್ ಪಂದ್ಯದಲ್ಲಿ ಭಾರತದ ಅಭಿಷೇಕ್ ವರ್ಮ ಹಾಗೂ ಸೌರಭ್ ಚೌಧರಿ ಅವರು ಅಂತಿಮ ಸುತ್ತನ್ನು ಪ್ರವೇಶಿಸಿದ್ದಾರೆ










