ಐಐಎಸ್‌ಸಿ ಕ್ಯಾಂಪಸ್‌ನ ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ…

60
firstsuddi

ಬೆಂಗಳೂರು: ಐಐಎಸ್‌ಸಿ ಕ್ಯಾಂಪಸ್‌ನ ಕಟ್ಟಡದ 6ನೇ ಪ್ಲೋರ್‌ನಿಂದ ಜಿಗಿದು ಪಿಹೆಚ್‌ಡಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ಬೆಳಗಿನ ಜಾವ 7:10ರ ಸುಮಾರಿಗೆ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

2022ರ ಬ್ಯಾಚ್​ನ ಡೈಮಂಡ್ ಖುಷ್ವಾ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಮೃತ ಡೈಮಂಡ್ ಖುಷ್ವಾ ಐಐಎಸ್‌ಸಿ ಕ್ಯಾಂಪಸ್‌ನಲ್ಲಿ ಕೆಮಿಕಲ್ ಸೈನ್ಸ್ ವಿಭಾಗದ ವಿದ್ಯಾರ್ಥಿಯಾಗಿದ್ದನು.

ಇನ್ನೂ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.