ಒಂದು ದಿನದ ಮಟ್ಟಿಗೆ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಪುಟಾಣಿ ಮಕ್ಕಳು…

224
firstsuddi

ಬೆಂಗಳೂರು : ಅನಾರೋಗ್ಯದಿಂದ ಬಳಲುತ್ತಿರುವ ಐದು ಮಕ್ಕಳ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸನ್ನು ಪೊಲೀಸ್ ಇಲಾಖೆ ಈಡೇರಿಸಿದ್ದು, ಮಹಮದ್ ಶಕೀಬ್, ಶ್ರಾವಣಿ ಬಂಟ್ವಾಳ, ರುತನ್ ಕುಮಾರ್, ಸಯ್ಯದ್ ಇಮಾದ್ ಈ ಐದು ಮಕ್ಕಳನ್ನು ತಾತ್ಕಾಲಿಕವಾಗಿ ಪೊಲೀಸ್ ಆಯುಕ್ತರಾಗಿ ಮಾಡುವ ಮೂಲಕ ನಗರ ಪೊಲೀಸ್ ಆಯುಕ್ತ ಬಾಸ್ಕರ್ ರಾವ್ ಅವರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮಾರಣಾಂತಿಕ ಖಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಮೇಕ್ ಎ ವಿಷ್ ಫೌಂಡೇಶನ್ ಸಂಸ್ಥೆಯ ನೇತೃತ್ವದಲ್ಲಿ ಪೊಲೀಸರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಒಂದು ದಿನದ ಮಟ್ಟಿಗೆ ನಗರ ಪೊಲೀಸ್ ಆಯುಕ್ತರಾಗಿ ಮಕ್ಕಳು ಅಧಿಕಾರ ಸ್ವೀಕರಿಸಿದರು. ಮಕ್ಕಳ ಆಸೆಯಂತೆ ಪ್ರತಿದಿನ ಆಯುಕ್ತರಿಗೆ ನೀಡುವ ಸಮಾನ ಗೌರವವನ್ನು ನೀಡಿ ಆಹ್ವಾನಿಸಲಾಯಿತು. ಗಾಡ್ ಆಫ್ ಹಾನರ್ ನೀಡಲಾಯಿತು. ಬಳಿಕ ಡಾಗ್ ಸ್ಕ್ವಾಡ್ ಕರೆದು ಪುಟಾಣಿಗಳನ್ನು ಪರಿಚಯಿಸಿದರು. ಬಳಿಕ ಆಯಕ್ತರ ಕಚೇರಿಗೆ ಕರೆದುಕೊಂಡು ಹೋಗಿ ಖುರ್ಚಿಯಲ್ಲಿ ಕೂರಿಸುವ ಮೂಲಕ ಮಕ್ಕಳ ಆಸೆಯನ್ನು ಈಡೇರಿಸಿದರು.